ಡೈಲಿ ವಾರ್ತೆ: 28/April/2024

ಬೈಕಂಪಾಡಿ: ಎರಡು ಲಾರಿಗಳ ನಡುವೆ ಡಿಕ್ಕಿ- ಚಾಲಕ ಗಂಭೀರ ಗಾಯ

ಬೈಕಂಪಾಡಿ:ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಚಾಲಕ ಗಂಭೀರ ಗಾಯಗೊಂಡ ಘಟನೆ ಬೈಕಂಪಾಡಿಯ  ಹೋಟೆಲ್ ಶ್ರೀ ದ್ವಾರ ಬಳಿ ಭಾನುವಾರ ನಡೆದಿದೆ.

ಅಪಘಾತದ ರಭಸಕ್ಕೆ ಒಂದು ಲಾರಿ ಗ್ರಾನೈಟ್ ಮಳಿಗೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಗ್ರಾನೆಟ್ ಗೆ ಹಾನಿಯಾಗಿದೆ. ಮಂಗಳೂರಿನಿಂದ ಮಲ್ಪೆಗೆ ಮೀನು ಸಾಗಾಟ ಮಾಡುತ್ತಿದ್ದ ಹಳೆಯ ಲಾರಿ ಸಂಪೂರ್ಣ ಹಾನಿಗೀಡಾಗಿದೆ.

ಚಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.