ಡೈಲಿ ವಾರ್ತೆ: 28/April/2024
ವಿಚಿತ್ರ ರೀತಿಯ ಉಪವಾಸ ಮಾಡುತ್ತಿದ್ದ ಸಹೋದರರು ಮೃತ್ಯು.!
ಗೋವಾ: ಪಣಜಿಯಲ್ಲಿ ವಿಚಿತ್ರ ರೀತಿಯಲ್ಲಿ ಉಪವಾಸ ಮಾಡುತ್ತಿದ್ದ ಸಹೋದರರು ಸಾವನ್ನಪ್ಪಿದ ಘಟನೆ ನಡೆದಿದೆ.
ಇವರು ಇಬ್ಬರು ದಿನಕ್ಕೆ ಒಂದೇ ಒಂದು ಖರ್ಜೂರ ತಿನ್ನುತ್ತಾ ಉಪವಾಸ ಮಾಡುತ್ತಿದ್ದವರು . ಮೃತಪಟ್ಟವರನ್ನು ಮೊಹಮ್ಮದ್ ಜುಬೇರ್ ಖಾನ್ (29), ಅಫನ್ ಖಾನ್ (27) ಎಂದು ಗುರುತಿಸಲಾಗಿದೆ.
ಜುಬೇರ್ ಮತ್ತು ಅಫನ್ ತಾಯಿ ರುಕ್ಸಾನಾ ಜೊತೆ ವಾಸವಿದ್ದರು. ಕೆಲವು ಸಮಯದಿಂದ ಈ ಉಪವಾಸ ಆಚರಿಸುತ್ತಿದ್ದರು. ವಿಚಿತ್ರ ಆಚರಣೆಗೆ ತಂದೆ ನಜೀರ್ ಖಾನ್ ಆಕ್ಷೇಪಿಸಿದ್ದಕ್ಕಾಗಿ ಅವರಿಂದಲೂ ಅಮ್ಮ ಮತ್ತು ಮಕ್ಕಳು ದೂರವಾಗಿದ್ದರು. ಈಗ ಒಂದೇ ದಿನ ಸಹೋದರರು ಮೃತಪಟ್ಟಿದ್ದು, ಅದೇ ದಿನವೇ ತಾಯಿಯೂ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಸಿವಿನಿಂದಲೇ ಜುಬೇರ್, ಅಫನ್ ಮೃತಪಟ್ಟಿರುವುದು ಎಂದು ತಿಳಿಯಲಾಗಿದೆ . ಈ ಬಗ್ಗೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ .