ಡೈಲಿ ವಾರ್ತೆ: 01/ಜೂ./2024

ಮೂಡುಗೆರೆ: ವಿದ್ಯುತ್ ಪ್ರವಹಿಸಿ ಕಾರ್ಮಿಕ ಮರದಲ್ಲೇ ಸಾವು!

ಚಿಕ್ಕಮಗಳೂರು: ಕಾಫಿತೋಟದಲ್ಲಿ ಸಿಲ್ವರ್ ಮರಗಸಿ ಮಾಡುವ ವೇಳೆ ವಿದ್ಯುತ್ ಶಾಕ್ ನಿಂದ ಮರದಲ್ಲೇ ಕಾರ್ಮಿಕ ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕು ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಶಾಕ್ ನಿಂದ ಮೃತಪಟ್ಟ ಕಾರ್ಮಿಕ ಚಂದ್ರಪ್ಪ (45) ಎಂದು ಗುರುತಿಸಲಾಗಿದೆ.

ಕಾಫಿತೋಟದಲ್ಲಿ ಬೆಳೆದಿರುವ ಸಿಲ್ವರ್ ಮರಗಳು ನೇರವಾಗಿ ಬೆಳೆಯುವ ಉದ್ದೇಶದಿಂದ ಮರಗಸಿ ಮಾಡಲಾಗುತ್ತದೆ.
ಚಂದ್ರಪ್ಪ ಮರಗಸಿ ಮಾಡುವ ವೇಳೆ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಸಿಲುಕಿ ವಿದ್ಯುತ್ ಪ್ರವಹಿಸಿ ಮರದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.