ಡೈಲಿ ವಾರ್ತೆ: 12/ಜೂ./2024

ಚಿತ್ರದುರ್ಗ: ನಟ ದರ್ಶನ್ ವಿರುದ್ಧ ಭುಗಿಲೆದ್ದ ಆಕ್ರೋಶ – ಸಿಬಿಐ ತನಿಖೆಗೆ ಆಗ್ರಹ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಖಂಡಿಸಿ ಕೋಟೆನಾಡು ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹ.

ಇಂದು ನೀಲಕಂಠೇಶ್ವರ ದೇಗುಲದಿಂದ ಆರಂಭಗೊಂಡ ಪ್ರತಿಭಟನೆ ಬಿಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರು, ನಟ ದರ್ಶನ್ ವಿರುದ್ದ ಪ್ರತಿಭಟನಾಕಾರರು ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು. ಚಪ್ಪಲಿ ಸೇವೆ ಬಳಿಕ ದರ್ಶನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ದರ್ಶನ್ ವಿರುದ್ಧ ಸಿಟ್ಟು ಹೊರಹಾಕಿದರು.

ಈ ವೇಳೆ ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಮಾತನಾಡಿ, ದರ್ಶನ್ ಅನೇಕ ಚಿತ್ರಗಳನ್ನು ಮಾಡಿ ಸಮಾಜ ತಿದ್ದುವ ಕೆಲಸ ಮಾಡಿದ್ದರು. ಆದರೆ ನಿಜ ಜೀವನದಲ್ಲಿ ಒಬ್ಬ ಭಿನ್ನವಾದ ವ್ಯಕ್ತಿಯಾಗಿದ್ದಾರೆ. ತಂದೆ- ತಾಯಿಯ ನೋವು ಎಂಥವರಿಗೂ ಕಣ್ಣೀರು ತರಿಸಿದೆ. ಒಂದು ವರ್ಷದ ಕೆಳಗೆ ಮದುವೆ ಆಗಿ, ಪತ್ನಿ ಗರ್ಭಿಣಿ ಇದ್ದಾರೆ ಈ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಗತಿ ಏನಾಗಬೇಡ ಎಂದು ಪ್ರಶ್ನಿಸಿದ ಅವರು, ಇಂತಹ ಕೊಲೆ ಮಾಡಿರುವ ದರ್ಶನ್ ಒಬ್ಬ ಅಮಾನವೀಯ ಹಾಗೂ ಕ್ರೂರ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದಾನೆ. ಹಿರಿಯರಿಗೆ ಮಗನ ವಿಚಾರ ತಿಳಿಸಬಹುದಿತ್ತು. ಕಾನೂನಿನಲ್ಲೂ ಕೂಡಾ ದೂರು ಕೊಡಲು ಅವಕಾಶ ಇತ್ತು. ಕೊಲೆ ಮಾಡುವ ಕೆಲಸ ಮಾಡಿದ್ದು ನಿಜಕ್ಕೂ ಸರಿಯಲ್ಲ. ನೇರವಾಗಿ ಈ ತಂಡ ಬಾಗಿಯಾಗಿರುವುದು ಕಂಡುಬಂದಿದ್ದು, ಕಾನೂನಿನಡಿ ಕಠಿಣ ಶಿಕ್ಷೆ ದರ್ಶನ್ ಗೆ ನೀಡಬೇಕು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು. ಮಾಜಿ ಶಾಸಕ ಎಸ್ ಕೆ ಬಸವರಾಜನ್ ಮಾತನಾಡಿ, ಇದು ರೇಣುಕಾಸ್ವಾಮಿಯ ಕೊಲೆ ಅಲ್ಲ, ಮಾನವೀಯತೆಯ ಕೊಲೆ. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಮತ್ತು ಇಂತಹ ಪ್ರಕರಣಗಳು ಪುನರ್ ಘಟಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.