ಡೈಲಿ ವಾರ್ತೆ: 16/ಜೂ./2024

ಉಡುಪಿ: ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಪ್ರೊ. ಎ. ರಾಜಾ ಹೃದಯಾಘಾತದಿಂದ ನಿಧನ

ಉಡುಪಿ: ನಗರದ ಪ್ರಸಿದ್ದ ಆಸ್ಪತ್ರೆಯಾದ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯರಾದ ಪ್ರೊ. ಎ. ರಾಜಾ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಪ್ರೊ. ಎ. ರಾಜಾ ಇಂದು ಮುಂಜಾನೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಂತರ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಉಡುಪಿ ಇಂದಿರಾ ನಗರದ ಅವರ ಮನೆಯಲ್ಲಿ ಇಂದು 2:30 ರಿಂದ ನಾಳೆ ಬೆಳಿಗ್ಗೆ 10:30ರ ತನಕ ಅಂತಿಮ ದರ್ಶನ ಪಡೆಯಬಹುದು.ನಂತರ ಅಂತಿಮ ಕ್ರಿಯೆ ನಡೆಯಲಿದೆ.ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರ ರನ್ನು ಅಗಲಿದ್ದಾರೆ.