ಡೈಲಿ ವಾರ್ತೆ: 16/ಜೂ./2024

ಬಿ. ಸಿ. ರೋಡು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಚಾಲಕ, ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರು!

ಬಂಟ್ವಾಳ: ಬಿ.ಸಿ.ರೋಡು- ಪೊಳಲಿ- ಮಂಗಳೂರು ಸಂಚರಿಸುವ ಖಾಸಗಿ ಬಸ್ಸೊಂದು ರವಿವಾರ ಕಮ್ಮಾಜೆ-ಕಾಗುಡ್ಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಚಾಲಕ- ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಬಸ್ ಬಿ.ಸಿ.ರೋಡಿನಿಂದ ಕೊಳತ್ತಮಜಲಿಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ರವಿವಾರವಾದ ಕಾರಣ ಬಸ್ಸಿನಲ್ಲಿ ಬರೀ ಇಬ್ಬರೇ ಪ್ರಯಾಣಿಕರಿದ್ದು, ಅವರಿಗೂ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.