ಡೈಲಿ ವಾರ್ತೆ: 22/ಜೂ./2024

ಉಳ್ಳೂರು ಕಾರ್ತಿಕೆಯ ಸುಬ್ರಮಣ್ಯ ದೇವಸ್ಥಾನದ ಮಾಜಿ ಮೊಕ್ತೇಸರರಾದ ಬಳ್ಕೂರು ಸುಬ್ರಾಯ ಉಡುಪ ವಿಧಿವಶ

ಕುಂದಾಪುರ: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಸುಬ್ರಾಯ ಉಡುಪ (94) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಶನಿವಾರ) ತಮ್ಮ ಬಳ್ಕೂರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಇವರು ಹಲವಾರು ವಿದ್ಯಾರ್ಥಿಗಳಿಗೆ ಮೆಚ್ಚಿನ ಗುರುಗಳಾಗಿ,
ಸಜ್ಜನ ಸರಳಿಕೆಯ ಸಾಕಾರ ಮೂರ್ತಿಯಾಗಿ, ಕಾರ್ತಿಕೆಯ ಸುಬ್ರಮಣ್ಯ ದೇವಸ್ಥಾನ ಉಳ್ಳೂರು ಇಲ್ಲಿನ ಆಡಳಿತ ಮುಕ್ತೇಸರರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.