ಡೈಲಿ ವಾರ್ತೆ: 11/ಜುಲೈ /2024
ಬಂಡಾಜೆ ಫಾಲ್ಸ್ ಗಳ ಬಳಿ ಪ್ರವಾಸಿಗರ ಹುಚ್ಚಾಟ – ಸಾವಿರಾರು ಅಡಿ ಆಳದ ಜಲಪಾತದ ಅಂಚಿನಲ್ಲಿ ರೀಲ್ಸ್
ಚಿಕ್ಕಮಗಳೂರು: ಜಲಪಾತದ ಬಳಿ ಎಚ್ಚರ ವಹಿಸಿ ಎಂದು ಪೊಲೀಸರು, ಜಿಲ್ಲಾಡಳಿತ ಎಷ್ಟೆ ಮನವಿ ಮಾಡಿದರೂ ಪ್ರವಾಸಿಗರು ಮಾತ್ರ ಹುಚ್ಚಾಟ ಮೆರೆಯುವುದನ್ನು ನೋಡಿದರೆ ನೀವು ಹೇಳೋದ್ ಹೇಳ್ತೀರಿ… ನಾವು ಮಾಡೋದು ಮಾಡ್ತೀರ್ತೀವಿ ಎಂಬಂತಿದೆ.
ಅದೇ ರೀತಿ ಇಲ್ಲೊಬ್ಬ ಪ್ರವಾಸಿಗ ತನ್ನ ಪ್ರಾಣದ ಹಂಗನ್ನು ತೊರೆದು ಫೋಟೋ ಕ್ಲಿಕ್ಕಿಸಲು ಸಾವಿರಾರು ಅಡಿ ಆಳದ ಜಲಪಾತದ ಅಂಚಿನಲ್ಲಿ ಕುಳಿತುಕೊಂಡಿದ್ದಾನೆ ಒಂದು ವೇಳೆ ಆಯತಪ್ಪಿ ಬಿದ್ದನೆಂದರೆ ಜೀವ ಉಳಿಯುವುದು ಬಿಡಿ ಹೆಣನೂ ಸಿಕ್ಕಲ್ಲ ಎಂಬಂತಿದೆ.
ಮೂಡಿಗೆರೆ ತಾಲೂಕಿನ ರಾಣಿಝರಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಗಡಿಭಾಗದಲ್ಲಿ ಬರುವ ಬಂಡಾಜೆ ಫಾಲ್ಸ್ ಗಳ ಬಳಿ ಪ್ರವಾಸಿಗರು ಬೇಜವಾಬ್ದಾರಿತನ ಮೆರೆದಿರುವುದು ಕಂಡುಬಂದಿದೆ, ಪ್ರವಾಸಿಗನೋರ್ವ ಎರಡು ಮೂರೂ ಸಾವಿರ ಅಡಿ ಆಳದ ಜಲಪಾತದ ಬಂಡೆಗಳ ಅಂಚಿನಲ್ಲಿ ಕುಳಿತು ಫೋಟೋ ತೆಗೆದುಕೊಳ್ಳುತ್ತಿದ್ದಾನೆ, ಒಂದು ವೇಳೆ ಜಾರಿ ಬಿದ್ದನೆಂದರೆ ಆತನ ಹೆಣ ಕೂಡ ಸಿಗುವುದು ಕಷ್ಟ ಒಂದು ವೇಳೆ ಸಿಕ್ಕರೂ ವಾರಗಟ್ಟಲೆ ಹುಡುಕಬೇಕಾಗಬಹುದು.
ಪೊಲೀಸರು, ಜಿಲ್ಲಾಡಳಿತ ಎಷ್ಟೆ ಮನವಿ ಮಾಡಿದರೂ ಮದ್ಯ ಸೇವಿಸಿ, ಗಾಂಜಾ ಹೊಡೆದು ಹುಚ್ವಾಟ ಮೆರೆಯುತ್ತಿರೋ ಪ್ರವಾಸಿಗರು, ಇದಕ್ಕೆ ಕಡಿವಾಣ ಹಾಕದಿದ್ದರೆ ದುರಂತ ಸಂಭವಿಸುವುದಂತು ಪಕ್ಕಾ.