ಡೈಲಿ ವಾರ್ತೆ: 23/ಜುಲೈ /2024

ಮನೆ ಮೇಲೆ ಮರ ಬಿದ್ದು ವೃದ್ಧೆ ಗಂಭೀರ – ಜೋಳಿಗೆ ಮೂಲಕ ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿರುಗಾಳಿ‌‌‌ ಸಹಿತ ಮಳೆಯ ಅಬ್ಬರ ಮುಂದುವರೆದಿದ್ದು ಇಂದು ಜು. 23 ರಂದು ಮಂಗಳವಾರ ಬಿರುಗಾಳಿ ಮಳೆಗೆ ಬೃಹತ್ ಮರವೊಂದು ಮನೆಯ ಮೇಲೆ ಮುರಿದು ಬಿದ್ದು ಮನೆಯಲ್ಲಿದ್ದ ವೃದ್ಧೆ ಗಂಭೀರ ಗಾಯಗೊಂಡ
ಘಟನೆ ಕಳಸ‌ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ನಡೆದಿದೆ.

ಮರ ಬಿದ್ದು ಗಂಭೀರ ಗಾಯಗೊಂಡ ವೃದ್ಧೆ ಬೆಲ್ಲಮ್ಮ (80) ಎಂದು ತಿಳಿದು ಬಂದಿದೆ.

ವೃದ್ಧೆಗೆ ಗಂಭೀರ ಗಾಯವಾಗಿದ್ದು, ಸರಿಯಾದ ರಸ್ತೆ ಮಾರ್ಗವಿಲ್ಲದೆ, ಗ್ರಾಮಸ್ಥರು ಸೇರಿಕೊಂಡು
ಬರೋಬ್ಬರಿ ಮೂರು ಕಿಮೀ ದೂರ ಜೋಳಿಗೆ ಮೂಲಕ ವೃದ್ಧೆಯನ್ನ ಹೊತ್ತೊಕೊಂಡು ಸಾಗಿ ಅವರನ್ನು ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಕಾರ್ಲೆ ಗ್ರಾಮಕ್ಕೆ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರುಮ, ನೂರಾರು ಬಾರಿ ಮನವಿ ಮಾಡಿದ್ದರು. ಆದರೆ, ಯಾರೊಬ್ಬರು ಈ ಕಡೆ ಮುಖ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.