ಡೈಲಿ ವಾರ್ತೆ: 24/ಜುಲೈ /2024

ಉತ್ತರ ಕನ್ನಡ: ನೆಜ್ಜೂರುನಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರಿಗೆ ಗಂಭೀರ ಗಾಯ!

ಸಿದ್ದಾಪುರ: ಉತ್ತರಕನ್ನಡ ಜೆಲ್ಲೆಯ ಸಿದ್ದಾಪುರ ತಾಲೂಕಿನ ನೆಜ್ಜೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಬಾಲಕರು ಸೇರಿ ಮೂವರಿಗೆ ಗಂಭೀರ ಗಾಯಗೊಂಡ ಘಟನೆ ಜು. 23 ರಂದು ಮಂಗಳವಾರ ತಡರಾತ್ರಿ ನಡೆದಿದೆ.

ಮನೆ ಗೋಡೆ ಕುಸಿದು ಗಂಭೀರ ಗಾಯಗೊಂಡವರು ಮೊಹಮ್ಮದ್ ಖಾಲಿಲ್ ಸಾಹೇಬ್ (65), ಅಯಾನ್ ಖಾನ್(11) ,ಅಯೂಬ್ ಖಾನ್(8) ಎಂದು ಗುರುತಿಸಲಾಗಿದೆ.

ಸಿದ್ದಾಪುರ ತಾಲೂಕಿನಲ್ಲಿ ಬಾರಿ ಮಳೆಯಿಂದಾಗಿ ಮಂಗಳವಾರ ವಾರ ತಡರಾತ್ರಿ ನೆಜ್ಜೂರು ಗ್ರಾಮದ ಮೊಹಮ್ಮದ್ ಖಾಲಿಲ್ ಅವರ ಮನೆಯ ಗೋಡೆ ಕುಸಿದು ಮೂವರು ಗಾಯಗೊಂಡಿರುತ್ತಾರೆ.

ಮನೆಯವರು ರೂಮಿನಲ್ಲಿ ಮಲಗಿದ್ದು ಮನೆ ಯಜಮಾನ ಮೊಹಮ್ಮದ್ ಖಾಲಿಲ್ ಅವರು ಇಬ್ಬರು ಮೊಮ್ಮಕ್ಕಳ ಜೊತೆ ಮನೆಯ ಹಾಲ್ ನಲ್ಲಿ ಮಲಗಿದ್ದರು. ತಡರಾತ್ರಿ ಬಾರಿ ಮಳೆಯಿಂದಾಗಿ ಮೆನೆಯ ಗೋಡೆ ಕುಸಿದು ಬಿದ್ದು ಹಾಲ್ ನಲ್ಲಿ ಇಟ್ಟಿರುವ ಗೋದ್ರೇಜ್ ಕಪಾಟು ಮಲಗಿದ್ದವರ ಮೇಲೆ ಬಿದ್ದಿರುತ್ತದೆ. ಇದರಿಂದಾಗಿ ಮೊಹಮ್ಮದ್ ಖಾಲಿಲ್ ಸಾಬ್ ಹಾಗೂ ಅಯಾನ್ ಖಾನ್ ಗಂಭೀರ ಗಾಯಗೊಂಡಿರುತ್ತಾರೆ.
ಇನ್ನೊರ್ವ ಬಾಲಕ ಅಯೂಬ್ ಖಾನ್ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾಸಿರ್ ಖಾನ್ ತಿಳಿಸಿದ್ದಾರೆ.
ಗಂಭೀರ ಗಾಯಗೊಂಡವರನ್ನು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ತಹಸೀಲ್ದಾರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಧ್ಯಕ್ಷರು, ಶಿಕ್ಷಣ ಇಲಾಖೆಯವರು, ಅರೋಗ್ಯ ಅಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.