ಡೈಲಿ ವಾರ್ತೆ: 25/ಜುಲೈ /2024

ನೇರಳಕಟ್ಟೆ ; ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ತೀವ್ರ ಹಾನಿ, ಮನೆ ಮಂದಿ ಪವಾಡ ಸದೃಶವಾಗಿ ಪಾರು

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ ಇಸ್ಮಾಯಿಲ್ ಮದನಿ ಎಂಬವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ತೀವ್ರ ಹಾನಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ಮನೆ ಮಂದಿಯೆಲ್ಲಾ ಮನೆಯೊಳಗೆಯೇ ಇದ್ದು ಅದೃಷ್ಟವಶಾತ್ ಪವಾಡ ಸದೃಶವಾಗಿ ಪಾರಾಗಿದ್ದಾರೆ.ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಪಕ್ಕದ ಮನೆಯವರ ಜಾಗದಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಬುಡ ಸಹಿತ ಕಿತ್ತು ಮನೆಯಂಗಳದ ತೆಂಗಿನ ಮರಕ್ಕೆ ಬಿದ್ದು ತೆಂಗಿನ ಮರ ತುಂಡಾಗಿ ಬಳಿಕ ಮನೆಯ ಮಾಡಿನ ಮೇಲೆ ಬಿದ್ದಿದೆ. ಮೂರು ಮುರಿಯುತ್ತಿದ್ದ ಶಬ್ದ ಕೇಳಿ ಹೆದರಿದ ಮನೆಯವರು ತಕ್ಷಣ ಮನೆಯ ಹೊರಗಡೆ ಓಡಿ ಹೋಗಿದ್ದು ಯಾವುದೇ ಪ್ರಾಣಾಯಾಮ ಸಂಭವಿಸಿಲ್ಲ.

ಸ್ಥಳಕ್ಕೆ ನೆಟ್ಲಮುಡ್ನೂರು ಗ್ರಾಮ ಕರಣಿಕೆ ವೈಶಾಲಿ ಹಾಗೂ ಗ್ರಾ.ಪಂ.ಸದಸ್ಯರು ಬೇಟಿ ನೀಡಿದ್ದಾರೆ.