ಡೈಲಿ ವಾರ್ತೆ: 01/ ಆಗಸ್ಟ್/2024
ವಾಹನ ಸವಾರರೇ ಎಚ್ಚರ:
ಇಂದಿನಿಂದ ಹೆದ್ದಾರಿಯಲ್ಲಿ 130 ಕಿ.ಮೀ. ವೇಗ ದಾಟಿದರೆ ಎಫ್ಐಆರ್
ಬೆಂಗಳೂರು: ಹೆದ್ದಾರಿಯಲ್ಲಿ ಅತೀ ವೇಗದಲ್ಲಿ ಸಂಚರಿಸುವ ಪ್ರಯಾಣಿಕರೇ ಎಚ್ಚರ. ಗುರುವಾರದಿಂದ (ಆ.1) ನಿಮ್ಮ ವೇಗದ ಮಿತಿ 130 ಕಿ.ಮೀ. ದಾಟಿದರೆ ಕೇಸ್ ಬೀಳಲಿದ್ದು, ರಾಜ್ಯಾದ್ಯಂತ ಈ ಕ್ರಮ ಜಾರಿಗೆ ಬರಲಿದೆ.
ಈ ಸಂಬಂಧ ಎಡಿಜಿಪಿ (ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗ) ಅಲೋಕ್‌ಕುಮಾರ್ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಒಂದೇ ದಿನ 155 ವಾಹನಗಳು 130ಕ್ಕಿಂತ ಹೆಚ್ಚು ಕಿ.ಮೀ. ವೇಗದಲ್ಲಿ ಸಂಚರಿಸಿರುವ ಬಗ್ಗೆ ಸಹ ಅವರು ದಾಖಲೆ ಬಿಡುಗಡೆ ಮಾಡಿದ್ದರು. ಆ.1ರಿಂದ 130 ಕಿ.ಮೀ. ವೇಗದ ಮಿತಿ ಮೀರುವ ವಾಹನಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯಸಂಹಿತೆ ಅಡಿಯಲ್ಲಿ ಪೊಲೀಸರು 130 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.