ಡೈಲಿ ವಾರ್ತೆ: 01/ ಆಗಸ್ಟ್/2024
ಮೊಳಹಳ್ಳಿ ಗ್ರಾಮದಲ್ಲಿ ವರುಣನ ಆರ್ಭಟ: ಹಲವು ಮನೆಗಳು ಜಲಾವೃತ, ತಹಶೀಲ್ದಾರರು, ಜಿಲ್ಲಾಧಿಕಾರಿ, ಪಂಚಾಯತ್ ಅಧಿಕಾರಿಗಳು ಭೇಟಿ
- ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.
ಸುದ್ದಿ: ಮೊಳಹಳ್ಳಿ :
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಗದ್ದೆಮನೆ ಉಪ ಗ್ರಾಮದಲ್ಲಿ ತಡ ರಾತ್ರಿಗೆ ಸುರಿದಂತಹ ಭಾರಿ ಮಳೆಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹೊಳೆಯನ್ನ ಸಮರ್ಪಕವಾಗಿ ಸುಚಿತ್ವಗೊಳಿಸದೆ ಗಿಡಗಂಟಿಗಳು ಬೆಳೆದಿರುವುದರಿಂದ ನದೀಮಟ್ಟದಲ್ಲಿ ಸಾಗಬೇಕಾದ ನೀರು ಒತ್ತಡದಿಂದಾಗಿ ಮನೆಗಳು ಜಲಾವೃತಗೊಂಡಿದೆ.
ಬುಧವಾರ ರಾತ್ರಿ ಸುರಿದಂತಹ ಭಾರಿ ಮಳೆಗೆ ಮೊಳಹಳ್ಳಿ ಗ್ರಾಮದ ಕಂಬಳಗದ್ದೆ ಮನೆಯ ಪ್ರದೀಪ್ ಶೆಟ್ಟಿ, ಗೀತಾ ಶೆಟ್ಟಿ,ಪ್ರೇಮ ಶೆಟ್ಟಿ, ಅವರ ಮನೆಯ ಸಂಪೂರ್ಣವಾಗಿ ಕುಸಿದು ನೆಲಸಮವಾಗಿದೆ.
ನದಿಗಳ ನೀರು ಸಂಪೂರ್ಣವಾಗಿ ಮೇಲ್ ಭಾಗಕ್ಕೆ ಬಂದಿರುವುದು ಮನೆಯಲ್ಲಿನ ಅಪಾರ ವಸ್ತುಗಳು ಹಾನಿಗೇಡಾಗಿದೆ. ರಾತ್ರಿ ಸಮಯದಲ್ಲಿ ಮನೆಯಲ್ಲಿರುವಂತಹ ಜಾನುವಾರುಗಳನ್ನ ಸಂಬಂಧಿಕರ ಮನೆಗೆ ಬಿಡಲಾಗಿದೆ. ಮನೆಯಲ್ಲಿ ವಾಸಿಸುವಂತಹ ಜನರು ಸುರಕ್ಷತಾ ದೃಷ್ಟಿಯಿಂದ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಹುದೊಡ್ಡ ಅನಾಹುತ ಒಂದು ತಪ್ಪಿದೆ. ಪ್ರತಿ ಬಾರಿಯೂ ಮಳೆಗಾಲದಲ್ಲಿ ನೀರು ಮೇಲ್ಬಾಗಕ್ಕೆ ಬರುತ್ತಿದ್ದು, ಕಳೆದ ಬಾರಿ ಮಳೆಗಾಲದ ಸಂದರ್ಭದಲ್ಲಿ ಮನೆಯ ವರಂಡಕ್ಕೆ ನೀರು ನುಗ್ಗಿದೆ. ಮನೆಯಲ್ಲಿರುವಂತಹ ಅಪಾರ ವಸ್ತುಗಳು ಹಾನಿಯಾಗಿದ್ದು, ಮನೆಯ ಪೀಠೋಪಕರಣಗಳು, ಟಿವಿ, ಫ್ರೀಜರ್ ಇನ್ನಿತರ ವಸ್ತುಗಳು ಕೂಡ ಹಾನಿಯಾಗಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಜಿಲ್ಲಾಧಿಕಾರಿ,ಪಂಚಾಯತ್ ಅಧಿಕಾರಿಗಳು :
ಘಟನೆ ನಡೆದಂತಹ ಮೊಳಹಳ್ಳಿ ಕಂಬಳಗದ್ದೆ ಮನೆಗೆ ಜಿಲ್ಲಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಆಗಮಿಸಿ ಸೂಕ್ತ ಪರಿಹಾರದ ಭರವಸೆಯನ್ನ ನೀಡಿದ್ದಾರೆ. ಕುಸಿ ದಂತಹ ಮನೆಗೆ ಸಮರ್ಪಕವಾಗಿ ಅಂತಹಂತವಾಗಿ ಪರಿಹಾರವನ್ನು ನೀಡುತ್ತೇವೆ, ನಿರ್ಮಾಣ ಕಾರ್ಯವು ಪ್ರಾರಂಭಿಸಲು ವಿಧಿಕ್ತವಾಗಿ ಸೂಚಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರದ ಭರವಸೆ ನೀಡುವುದರೊಂದಿಗೆ ಮನೆಯ ಕುಟುಂಬಸ್ಥರಿಗೆ ಧೈರ್ಯವನ್ನು ತುಂಬಿದ್ದಾರೆ.ಎಂದು ಶ್ರೀ ವೇಣು ಗೋಪಾಲ್ ಶೆಟ್ಟಿ ಕಂಬಳಗದ್ದೆಮನೆ ಸ್ಥಳೀಯ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಪ್ರತಿ ವರ್ಷವೂ ಭಾರಿ ಮಳೆಗೆ ನದಿಗಳಲ್ಲಿ ನೀರು ಮನೆ ಬಾಗಿಲಿಗೆ ಬಂದು ಸಮಸ್ಯೆ ಆಗುತ್ತಿದ್ದು ಇದರ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿಯನ್ನು ನೀಡಲಾಗಿದೆ.
” ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಪಂಚಾಯತ್ ಅಧಿಕಾರಿಗಳು ಆಗಮಿಸಿ ಸೂಕ್ತ ಭರವಸೆಯನ್ನು ಕೊಡುವಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಪೂರ್ತಿ ಪ್ರಮಾಣದ ಮನೆಯನ್ನ ನಿರ್ಮಿಸಿಕೊಳ್ಳುವಂತೆ ಭರವಸೆ ನೀಡಿದ್ದಾರೆ. ಮಳೆ ನೀರು ಸಂಪೂರ್ಣವಾಗಿ ಮನೆಗೆ ನುಗ್ಗಿದರಿಂದ ಮನೆ ಕುಸಿದಿದೆ. ಜಾನುವಾರು ಇತರ ಪರಿಕರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.