ಡೈಲಿ ವಾರ್ತೆ: 05/ಆಗಸ್ಟ್/2024

ವರಾಹಿ ಪ್ರವಾಹದ ಮೊದಲನೇ ಮುನ್ನೆಚ್ಚರಿಕೆಯ ಸೂಚನೆ.

ಮಾಸ್ತಿಕಟ್ಟೆ: ವರಾಹಿ ಯೋಜನೆಯ ಮಾನಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟವು ಏಕಪ್ರಕಾರವಾಗಿ ಏರುತ್ತಿದೆ.

ಮಾನಿ ಜಲಾಶಯದ ಗರಿಷ್ಟ ಮಟ್ಟವು 594.36 ಮೀಟರ್ ಆಗಿದ್ದು ಮತ್ತು ಈಗಿನ ಜಲಾಶಯದ ಮಟ್ಟವು ದಿನಾಂಕ:05.08.2024 ರಂದು ಬೆಳಗ್ಗೆ 8:00 ಘಂಟೆಗೆ 588.15 (65.17%) ಮೀಟರ್‌ಗಳಾಗಿರುತ್ತದೆ.

ಈ ದಿನದ ಮಾನಿ ಜಲಾಶಯದ ಒಳಹರಿವು ಸುಮಾರು 3393 ಕ್ಯುಸೆಕ್ಸ್ ಆಗಿರುತ್ತದೆ. ಇದೇ ರೀತಿ ಜಲಾಶಯಕ್ಕೆ ಒಳಹರಿವು ಮುಂದುವರೆದ ಪಕ್ಷದಲ್ಲಿ, ಜಲಾಶಯವು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿರುತ್ತದೆ. ಮಾನಿ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಹೊರಬಿಡಲಾಗುವುದು.

ಆದ್ದರಿಂದ, ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ವರಾಹಿ/ಹಾಲಾಡಿ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರು ಮಾಸ್ತಿ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.