ಡೈಲಿ ವಾರ್ತೆ: 20/ಆಗಸ್ಟ್/2024

ಮಂಗಳೂರು: ಎರಡು ಕಾಲೇಜು ವಿದ್ಯಾರ್ಥಿಗಳ ನಡುವೆ ಫುಟ್ಬಾಲ್ ಆಟದಲ್ಲಿ ಕಿರಿಕ್‌ – ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್‌ ಮಾಡಿ ಅರೆಬೆತ್ತಲೆಗೊಳಿಸಿ ಹಲ್ಲೆ.!
(ಹಲ್ಲೆ ವಿಡಿಯೋ ವೈರಲ್)

ಮಂಗಳೂರು: ಫುಟ್ಬಾಲ್ ಆಟದಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಿರಿಕ್ ಶುರುವಾಗಿದ್ದು, ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಯದ್ವಾತದ್ವಾ ಹಲ್ಲೆ ಮಾಡಿದ್ದು,ವಿಡಿಯೊ ವೈರಲ್‌ ಆಗಿದೆ.

ಮಂಗಳೂರಿನ ಎರಡು ಕಾಲೇಜಿನ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಮಂಗಳೂರಿನ ಯೆನಪೊಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್‌ ನಡೆದಿದೆ. ಘಟನೆಯಲ್ಲಿ ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜನ್ಮದ್ ಎಂಬ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿದ ದಿಯಾನ್,ಅನ್ನೈ, ತಸ್ಮಿನ್, ಸಲ್ಮಾನ್, ಅನಾಸ್ ಎಂಬ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಹಾಕಾಳಿ ಪಡ್ಪು ಬಳಿ ಮನಬಂದಂತೆ ಥಳಿಸಿ, ಸಿಗರೇಟ್‌ನಿಂದ ಸುಟ್ಟು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಅರೆಬೆತ್ತಲು ಗೊಳಿಸಿ ಬಸ್ಕಿ ಹೊಡೆಸಿ ಕ್ಷಮೆ ಕೇಳುವಂತೆ ಥಳಿಸಿದ್ದಾರೆ.
ಈ ವಿಡಿಯೊವೆಲ್ಲವೂ ವೈರಲ್‌ ಆಗಿದೆ. ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.