


ಡೈಲಿ ವಾರ್ತೆ: 29/Sep/2024



ಸಮಾಜ ಸೇವಕ ಕೆ. ಎಚ್. ಹುಸೈನಾರ್ (ಜೋಯಿನಿ) ಅವರಿಗೆ ಬಿಲಾಲ್ ಫಂಡ್ ಗ್ರೂಪ್ ಹಾಗು ಮುನಿರುಲ್ ಇಸ್ಲಾಂ ಮದರಸ ಎಂ. ಕೋಡಿ. ಹಳೆ ವಿದ್ಯಾರ್ಥಿಗಳಿನಿಂದ ಸನ್ಮಾನ.
ಕುಂದಾಪುರ: ಮುನೀರುಲ್ ಇಸ್ಲಾಂ ಮದರಸ ಎಂ. ಕೋಡಿ ವತಿಯಿಂದ ನಡೆದ ಮಿಲಾದ್ ಕಾರ್ಯಕ್ರಮದಲ್ಲಿ ಬಿಲಾಲ್ ಫಂಡ್ ಹಾಗು ಹಳೆ ವಿದ್ಯಾರ್ಥಿ ಗಳಿಂದ ಸಮಾಜ ಸೇವಕ ಆಪತ್ ಭಾಂದವ ಜಾತಿ ಧರ್ಮ ನೋಡದೆ ಹಲವಾರು ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಹಾಯ ಚಾಚುವ ಸದಾ ಹಸನ್ಮುಖಿ ಊರಿನಲ್ಲಿ ಪರ ಊರಿನಲ್ಲಿ ಯಾರು ತೀರಿಕೊಂಡರು ಅಲ್ಲಿ ಮೊದಲು ಹೋಗಿ ಮಯ್ಯತ್ ಪರಿಪಾಲನೆ ಮಾಡಿ ಕೊನೆಯ ದಫನ್ ತನಕ ನಿಂತು ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಕೊಡುವ ವ್ಯಕ್ತಿ ಎಲ್ಲರಿಗೆ ಜೋಯಿನೀ ಎಂದು ಚಿರ ಪರಿಚಿತರಾಗಿರುವ ಕೆ. ಎಚ್. ಹುಸೈನಾರ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.