


ಡೈಲಿ ವಾರ್ತೆ: 05/OCT/2024


ಕಡಬ: ಬೈಕ್ ಹಾಗೂ ಕಾರು ನಡುವೆ ಅಪಘಾತ – ಸವಾರ ಮೃತ್ಯು
ಕಡಬ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ.
ಮೃತರನ್ನು ಕಡಬ ಹಳೇಸ್ಟೇಷನ್ ನಿವಾಸಿ ಹಾಗೂ ಕಡಬ ಸಿಎ ಬ್ಯಾಂಕ್ ಮಾಜಿ ಉದ್ಯೋಗಿ ಹಸೈನಾರ್ ಎಂದು ಗುರುತಿಸಲಾಗಿದೆ.
ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.