ಡೈಲಿ ವಾರ್ತೆ: 16/OCT/2024

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ- ಇಬ್ಬರು ಮಕ್ಕಳು ಸೇರಿ 06 ಮಂದಿಗೆ ಗಾಯ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಸಿಟಿ ಬಸ್ಸೊಂದು ಪಲ್ಪಿಯಾಗಿ ಇಬ್ಬರು ಮಕ್ಕಳು ಸೇರಿ 06 ಮಂದಿ ಗಾಯಗೊಂಡ ಘಟನೆ ಅ. 16 ರಂದು ಬುಧವಾರ ಬೆಳಿಗ್ಗೆ ಶಿವಮೊಗ್ಗದ ವಿನೋಬ ನಗರದ ಬೊಮ್ಮನಕಟ್ಟೆ ರೈಲ್ವೆ ಗೇಟ್ ಬಳಿ ನಡೆದಿದೆ.

ಚಾಲಕ ನಿರ್ಲಕ್ಷ್ಯದಿಂದ ವೇಗವಾಗಿ ಬಸ್ ಚಲಾಯಿಸಿ, ಹಂಪ್ ಹಾರಿಸಿದ ಪರಿಣಾಮ ಸ್ಟೇರಿಂಗ್ ಕಟ್ ಆಗಿ, ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಬ್ಬಿಣದ ಫೆನ್ಸಿಂಗ್ ದಾಟಿ, ಚರಂಡಿಗೆ ಬಸ್ ಬಿದ್ದಿದೆ.
ಬೊಮ್ಮನಕಟ್ಟೆಯಿಂದ ಗೋಪಾಳಕ್ಕೆ ಹೊರಟಿದ್ದ ಸಿಟಿ ಬಸ್ ನಲ್ಲಿ ಸುಮಾರು 20 ಜನ ಪ್ರಯಾಣಿಕರಿದ್ದರು. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಎಲ್ಲಾ 6 ಜನ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.