ಡೈಲಿ ವಾರ್ತೆ: 23/OCT/2024

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ, ಪತ್ರಕರ್ತರು ಮಾದ್ಯಮ ವಿಶ್ಲೇಷಕರು.M:[email protected]

” ಹಾಸ್ಯಾಸ್ಪದದ ಮೂಲಕ ನಗಿಸುವ ಕಲಾವಿದನ ಬದುಕಿನಲ್ಲಿ ನೋವಿನ ಸೂತಕ….!”ರಂಗಸ್ಥಳ ದಲ್ಲಿ ಗೆಜ್ಜೆ ಕಟ್ಟಿ ಕುಣಿದ ಕಾಲಿಗೆ ಅನಾರೋಗ್ಯದ ಕಂಠಕ….!”ಕಾಲಿನ ಮಂಡ್ಡಿ ಚಿಪ್ಪಿನ ಶಸ್ತ್ರಚಿಕಿತ್ಸೆಗೆ ಬೇಕು 7 ಲಕ್ಷದಷ್ಟು ವೆಚ್ಚ….!” ಕಗ್ಗತ್ತಲೆಯಲ್ಲಿ ಬೆಳಕಿನ ಸೇವೆ ನೀಡಿದವರಿಗೆ ಜೀವನದಲ್ಲಿ ಕತ್ತಲು….!” ಸಹಾಯದ ನಿರೀಕ್ಷೆಯಲ್ಲಿ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಯವರ ಮನವಿಯ ಕಹಾನಿ…….!” ಮಾನವೀಯತೆಯನ್ನ ಮೆರೆಯೋಣ ಬನ್ನಿ….!”

“ಯಕ್ಷಗಾನ ರಂಗದಲ್ಲಿ ಹಾಸ್ಯವೇ ಇವರ ಬದುಕಿನ ಜೀವಳ, ನೋವುಂಡ ಮನಸುಗಳಿಗೆ ಹಾಸ್ಯದ ಸಿಂಚನ ವನ್ನು ಗುಣಪಡಿಸುವ ಕಲಾವಿದ. ಯಕ್ಷರಂಗದ ವೇದಿಕೆಯ ಮೇಲೆ ನಗುವಿನ ಅಲೆಯಲ್ಲಿ ತೇಲಾಡಿಸುವ ಮಾಂತ್ರಿಕ, ಯಕ್ಷ ಪ್ರಸಂಗವನ್ನ ಇನ್ನಷ್ಟು ಮೆರಗು ತರುವ ಮೇರು ಕಲಾವಿದ. ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡ ಯಕ್ಷ ಮೇರು ಪರ್ವತ, ಹಾಸ್ಯಲೋಕದ ಧೀಮಂತ ಹಿರಿಯ ವ್ಯಕ್ತಿ ಹಳ್ಳಾಡಿ ಜಯರಾಮ ಶೆಟ್ಟಿ.
(68 ವರ್ಷ )ಇವರ ಹೆಸರನ್ನ ಕೇಳಿದರೆ ನಗುವನ್ನು ನೆನಪು ನೆನಪಿಸುತ್ತದೆ, ನೊಂದ ಮನಸ್ಸುಗಳಿಗೆ ಹಿಂಬು ತುಂಬುತ್ತದೆ. ಆದರೆ ಹಾಸ್ಯದ ನಗೆಯಲ್ಲಿ ತೇಲಾಡಿಸುವ ಇವರ ಬದುಕು ಈಗ ಅನಾರೋಗ್ಯದಲ್ಲಿ ಕ್ಷಪಿಸುತಿದೆ. ನೋವಿನ ಹಾಸಿಗೆಯಲ್ಲಿ ಜೀವ ಒದ್ದಾಡುತ್ತಿದೆ. ಎರಡು ಕಾಲಿನ ಮಂಡಿ ಶಸ್ತ್ರ ಚಿಕಿತ್ಸೆ ಗೆ ಬದುಕು ಸವೆಯುವಂತೆ ಮಾಡಿದೆ.

ಹಳ್ಳಾಡಿಯವರ ಜೀವನ ಪಯಣ :-
1955 ರ ಫೆ. 01ರಂದು ಅಕ್ಕಮ್ಮ ಶೆಡ್ತಿ ಮತ್ತು ಅಣ್ಣಪ್ಪ ಶೆಟ್ಟಿಯವರ ಪುತ್ರನಾಗಿ ಹರ್ಕಾಡಿ “ಅಬ್ಬಿಮನೆ” ಪರಿಸರದಲ್ಲಿ ಜನಿಸಿದರು.ಓದು ಇವರ ಬದುಕಿಗೆ ಹಿಡಿಸಲಿಲ್ಲ, ಕಲಿತಿದ್ದು ಅಲ್ಪ ವಿದ್ಯೆ.4ನೇ ತರಗತಿಗೆ ವಿದ್ಯಾಗೆ ವಿದಾಯ ಹೇಳಿದರು. ಶಿಕ್ಷಣ ಜೀವನದತ್ತ ಬೇಸತ್ತ ಇವರು ಕಲಾರಾಧನೆ ಕೈಹಿಡಿದು, 10ನೇ ವರ್ಷಕ್ಕೆ ಯಕ್ಷಗಾನ ದತ್ತ ಮುಖ ಮಾಡಿದರು. ಅಲ್ಲಿಂದ ಕಲಾ ಸೇವೆ ಮುಂದುವರಿತು. ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ಪ್ರಸ್ತುತ 68 ವರ್ಷ, ಅವರು ಯಕ್ಷಗಾನದ ಪಯಣ 58 ವರ್ಷ. ಯಕ್ಷ ಪಯಣದಲ್ಲಿ ಮತ್ತೆ ಹಿಂದೆ ತಿರುಗಿ ನೋಡೇ ಇಲ್ಲ. ಕಲಾ ಸೇವೆಯನ್ನೇ ತನ್ನ ಜೀವನದ ದಾರಿಯಾಗಿ ಮಾಡಿಕೊಂಡರು. ಯಕ್ಷಗಾನದ ಕಲೆಯನ್ನ ಕರಗತ ಮಾಡಿಕೊಂಡಿದ್ದು, ಅಮಾಸೆಬೈಲು ಕಿಟ್ಟಪ್ಪ ಹೆಬ್ಬಾರ್ ಮೂಲಕ ವಿಶೇಷವಾಗಿ ಯಕ್ಷಗಾನದ ಹಾವಭಾವವನ್ನ ಕಲಿತುಕೊಂಡರು. ಅವರ ಮೂಲಕವೇ ಯಕ್ಷರಂಗದ ರಂಗ ಮಂಚವನ್ನು ಏರಿ ವಿಜ್ರಂಭಿಸಿದರು. ಯಕ್ಷರಂಗದ ಅಪ್ಪಟ ಗುರು ಹಳ್ಳಾಡಿ ಮಂಜಯ್ಯ ಶೆಟ್ಟಿ ಅವರ ಪಾತ್ರ ಅಗ್ರಗಣ್ಯ ಇವರ ಕಲಾ ಸೇವೆಯ ಯಕ್ಷಗಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದು.

ಸುಧೀರ್ಘ ಯಕ್ಷ ಪಯಣ :
58 ವರ್ಷಗಳ ಕಾಲ ಸುದೀರ್ಘ ಯಕ್ಷಪ್ರಯಣದ ಜೀವನವನ್ನು ಸಾಗಿಸಿದವರು. ಕಮಲಶಿಲೆ ಮಂದಾರ್ತಿ, ಪೇರಡೂರು, ಅಮೃತೇಶ್ವರಿ ತಿರುಗಾಟದ ಬಳಿಕ, ಹೊಸತನದ ಹಂಬಲದೊಂದಿಗೆ ಡೇರೆ ಮೇಳ ಸಾಲಿಗ್ರಾಮಕ್ಕೆ ಸೇರಿಕೊಂಡು,25 ವರ್ಷ ಯಕ್ಷ ಪಯಣ ಸಾಗಿಸಿದರು. ಯಕ್ಷಗಾನದ ತೆಂಕು ಮತ್ತು ಬಡಗುತ್ತಿನಲ್ಲಿ ಹೆಸರಾಂತ ಹಾಸ್ಯ ಕಲಾವಿದರಾಗಿ ಮಿಂಚಿದರು. ನಗುವಿನ ಅಲೆಯಲ್ಲಿ ಇವರನ್ನು ಯಾರು ಮೀರಿಸುವ ಸಾಹಸವೇ ಮಾಡಿಲ್ಲ. ಸಾವಿರಾರು ಜನರನ್ನ ನಗಿಸಿದ ಕಲಾವಿದನಿಗೆ ನೋವೆಂಬ ಹತಾಶೆ ಆವರಿಸಿದೆ.

ಹಾಸ್ಯ ಕಲಾವಿದನಿಗೆ ಅನಾರೋಗ್ಯ ಬಾದೆ, ಸಹಾಯಕ್ಕಾಗಿ ಮನವಿ :-
ಸರಿಸುಮಾರು ಯಕ್ಷಗಾನ ಕ್ಷೇತ್ರದಲ್ಲಿ 58 ವರ್ಷಗಳ ತಿರುಗಾಟ ಸುಲಭದ ಮಾತಲ್ಲ, ಕಲಾರಾಧನೆ ಇವರ ಬದುಕಿನ ಜೀವಾಳವಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆ ಮತ್ತು ಪ್ರಸಿದ್ಧ ಮೂಳೆ ತಜ್ಞ ಮೊಳಹಳ್ಳಿ ಶಾಂತರಾಮ ಶೆಟ್ಟಿ ಅವರ ವೈದ್ಯೋಪಚಾರವನ್ನು ಕೂಡ ಪಡೆದಿದ್ದಾರೆ. ಎರಡು ಕಾಲುಗಳು ಒಂದಕ್ಕೊಂದು ಪರಸ್ಪರ ತಾಗಿಕೊಂಡು ಮೂಳೆಯ ಮುಂಗಾಲಿನ ಚಿಪ್ಪು ಅತಿಯಾಗಿ ಸವೆದಿರುವುದರಿಂದ ಶಸ್ತ್ರ ಚಿಕಿತ್ಸೆಗೆ ಒಳಪಡುವ ಅವಶ್ಯಕತೆ ಸನಿಹದಲ್ಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತವಾಗಿ ಮಂಡಿ ನೋವು ತೀವ್ರವಾಗಿ ಬಾರಿಸಿದ್ದರಿಂದ ರಂಗ ಏರಲಾಗುತ್ತಿಲ್ಲ, ಎರಡು ಕಾಲುಗಳ ಚಿಕಿತ್ಸೆ ಗೆ ಸುಮಾರು 7 ಲಕ್ಷಕ್ಕೂ ಮಿಕ್ಕಿ ಹಣ ಸಹಾಯ ಬೇಕಾಗಿದೆ. ದುಡಿಮೆಯ ಆಧಾರವೇ ಇವರಿಗೆ ಬದುಕಿನ ನಿರ್ವಹಣೆಗೆ ಸಾಕಾಗುತ್ತಿತ್ತು. ಕಷ್ಟ ಮತ್ತು ಸುಖಗಳ ನಡುವಿನ ನಡುವೆ ರಂಗದ ದುಡಿಮೆಯು ಜೀವನವನ್ನು ನಿರ್ವಹಣೆಗಷ್ಟೇ ಸೀಮಿತವಾಗುತ್ತಿತ್ತು. ಶಸ್ತ್ರ ಚಿಕಿತ್ಸೆ ಗೆ ಬೇಕಾದಂತಹ ಆರ್ಥಿಕತೆ ಇವರಲ್ಲಿಲ್ಲ. ಮುಂದೇನು ಮಾಡುವುದು ಎಂದು ದಿಕ್ಕು ತೋಚುತ್ತಿಲ್ಲ ಎನ್ನುತ್ತಾರೆ ಹಳ್ಳಾಡಿ ಜಯ ರಾಮ ಶೆಟ್ಟಿ ಯವರು. ಮೊದಲು ಹೃದಯ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ, ಈಗ ಕುಣಿಯುವ ಕಾಲಿಗೆ ಕಂಟಕ ಬಂದಿದೆ. ಎರಡು ಕಾಲುಗಳ ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಪಡದೆ, ರಂಗ ವನ್ನ ಮತ್ತೆ ಎರಕೂಡದು ಎನ್ನುವುದು ವೈದ್ಯರ ಸಲಹೆ. ಮಂಡಿ ನೋವಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೇ ಇದ್ದಾಗ, ವೈದ್ಯರ ಬಳಿ ಪರೀಕ್ಷಿಸಿದಾಗ ಶಸ್ತ್ರ ಚಿಕಿತ್ಸೆ ಮಾಡುವುದೊಂದೇ ದಾರಿ ಎನ್ನುವುದು ಅವರ ಸಲಹೆಯಾಗಿತ್ತು.ಮಂಡಿ ನೋವಿನಲ್ಲಿಯೇ ಬದುಕು ಕಳೆಯುದು ಕಷ್ಟ ವಾಗಿದೆ.ಸಹಾಯಕ್ಕಾಗಿ ಅಂಗಲಾಚುತಿದ್ದಾರೆ ಹಾಸ್ಯ ಕಲಾವಿದ. ನಾವೆಲ್ಲರೂ ಮುಕ್ತ ಮನಸ್ಸಿನಿಂದ ಸಹಾಯ ಮಾಡುವುದು ಒಂದೇ ನಮಗಿರುವ ಭಾಗ್ಯ. ನಕ್ಕು ನಗಿಸಿದ ಹಾಸ್ಯ ಕಲಾವಿದನ ಬದುಕು ನೋವಿನಲ್ಲಿ ನಗುತಿದೆ. ನೊಂದ ಹಾಸ್ಯ ಕಲಾವಿದನ ಬದುಕಿಗೆ ಸಾಯ ಹಸ್ತವನ್ನು ಚಾಚಬೇಕಿದೆ. ಅವರ ನಗುವನ್ನು ಅವರ ಹಾಸ್ಯವನ್ನ ಕಂಡ ನಮಗೆ ಅವರ ನೋವಿನ ಕ್ಷಣವನ್ನು ನೋಡುವ ಭಾಗ್ಯ ದೊರೆಯದಿರಲಿ. ನಾವೆಲ್ಲರೂ ಮುಕ್ತ ಮನಸ್ಸಿನಿಂದ ಸಹಾಯ ಮಾಡಿ ಕಲಾವಿದರ ಬದುಕಿಗೆ ಅಡಿಪಾಯವಾಗುಣ. ಇವರ ಕುಟುಂಬವು ಕುಂದಾಪುರ ತಾಲೂಕಿನ ಹಳ್ಳಾಡಿಯಲ್ಲಿ ನೆಲೆ ಕಂಡಿದ್ದು ಪತ್ನಿ ರೇಣುಕಾ ಶೆಟ್ಟಿ, ಪುತ್ರ ರತೀಶ್ ಶೆಟ್ಟಿ ಪುತ್ರಿ ಸೌಮ್ಯ ಶೆಟ್ಟಿ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ.

ಸಹಾಯ ಮಾಡಲು ಇಚ್ಚಿಸುವ ಮುಕ್ತ ಮನಸ್ಸಿನ ಸಹೃದಯ ಅಭಿಮಾನಿಗಳು ಕೆಳಗಿನ ಮಾಹಿತಿಯನ್ನು ದೃಢೀ ಪಡಿಸಿಕೊಳ್ಳಿ.
ಹೆಸರು : ಹಳ್ಳಾಡಿ ಜಯರಾಮ ಶೆಟ್ಟಿ
ಬ್ಯಾಂಕ್ :ಕರ್ನಾಟಕ ಬ್ಯಾಂಕ್
ಶಾಖೆ : ಕಕ್ಕುಂಜೆ ಶಾಖೆ
ಉಳಿತಾಯ ಖಾತೆ ಸಂಖ್ಯೆ: 3942500100172001
IFSC CODE:KARB0000394
ಮೊಬೈಲ್ ಸಂಖ್ಯೆ :9353834772

” ಸುದ್ದಿ ಮನೆ ಪತ್ರಿಕೆಯೊಂದಿಗೆ ಹಳ್ಳಾಡಿ ಅವರ ಮಾತು….!’

ಪತ್ರಿಕೆಯ ವಿಶೇಷ ವರದಿಗಾರರ, ಪತ್ರಕರ್ತರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರು ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ ಅವರೊಂದಿಗೆ ಸಂದರ್ಶನ ನಡೆಸಿದ್ದಾರೆ.
” ಯಕ್ಷಗಾನ ಪಯಣವನ್ನು ಸಾಗಿಸಿದ ತೃಪ್ತಿ ನನಗಿದೆ. ಶಸ್ತ್ರ ಚಿಕಿತ್ಸೆ ನಂತರ ಮೂರು ತಿಂಗಳ ವಿಶ್ರಾಂತಿ ತೆಗೆದುಕೊಳ್ಳಬೇಕಿದೆ. ಸುಮಾರು ಏಳು ಲಕ್ಷದವರೆಗೆ ವೆಚ್ಚ ಬರಿಸಬೇಕಿದ್ದು, ಈಗಾಗಲೇ ಹೃದಯಕ್ಕೆ ಮೂರು ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಹೃದಯದ ಚಿಕಿತ್ಸೆಯ ನಂತರ ಸ್ವಲ್ಪ ಪ್ರಮಾಣದ ಡಯಾಬಿಟಿಸ್ ಕಂಡುಕೊಂಡಿದೆ. ಸಮಸ್ತ ಕಲಾಭಿಮಾನಿಗಳಲ್ಲಿ ಸಹಾಯವನ್ನು ಕೇಳುತ್ತಿದ್ದೇನೆ. ಶಸ್ತ್ರ ಚಿಕಿತ್ಸೆ ನಂತರ ಮತ್ತೆ ಕಲಾ ಸೇವೆಗೆ ಮರಳುವ ಆಸೆ ನನಗಿದೆ. ನಿಮ್ಮಂತವರ ಪ್ರೀತಿ ನಮ್ಮ ಮೇಲೆ ಸದಾ ಹೀಗೆ ಇರಲಿ ಎನ್ನುವ ಆತ್ಮೀಯತೆ ಅವರ ಮಾತಿನಲ್ಲಿ ವ್ಯಕ್ತವಾಯಿತು.”

– ಹಳ್ಳಾಡಿ ಜಯರಾಮ ಶೆಟ್ಟಿ, ಪ್ರಸಿದ್ಧ ಹಾಸ್ಯ ಯಕ್ಷಗಾನ ಕಲಾವಿದ.