ಡೈಲಿ ವಾರ್ತೆ: 30/OCT/2024

ವಿಟ್ಲ ಪೊಲೀಸರಿಂದ ಇಬ್ಬರು ಖತರ್ನಾಕ್ ಕಳ್ಳರ ಬಂಧನ.

ಬಂಟ್ವಾಳ : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ ಬೋಳಿಯಾರ್ ಧರ್ಮನಗರ ನಿವಾಸಿ ಮಹಮ್ಮದ್‌ ರಿಯಾಜ್‌ ಹಸನಬ್ಬ @ ರಿಯಾಜ್‌ (38) ಮತ್ತು ಉಳ್ಳಾಲದ ಹಳೆಕೋಟೆ ನಿವಾಸಿ ಮೊಹಮ್ಮದ್‌ ಇಂತಿಯಾಜ್ (38 ) ಬಂಧಿತ ಆರೋಪಿಗಳು.

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾದ ತಂಡದ ಸಿಬ್ಬಂದಿಗಳು ಮಂಗಳವಾರ ಮಾಣಿ ಜಂಕ್ಷನ್‌ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ವಿಚಾರಿಸಲಾಗಿ ವಿಟ್ಲ ಠಾಣೆಯ ಮಿತ್ತೂರು, ಕೊಡಾಜೆಯಲ್ಲಿ ಮನೆ ಕಳವು ನಡೆಸಿದ ಎರಡು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿಯಲ್ಲಿ ಕಳವುಗೈದ ಎರಡು ಪ್ರಕರಣಗಳಲ್ಲಿ ಬಾಗಿಯಾಗಿರುವುದು ಪತ್ತೆಯಾಗಿರುತ್ತದೆ.

ಆರೋಪಿ ಮಹಮ್ಮದ್‌ ರಿಯಾಜ್‌ ಹಸನಬ್ಬ ಎಂಬಾತನ ವಿರುದ್ದ ಕೇರಳ ರಾಜ್ಯದ ಕುಂಬಳೆ ಹಾಗೂ ಮಂಗಳೂರು ನಗರ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರೂ 1.35 ಲಕ್ಷ ಮೌಲ್ಯದ ಗ್ಯಾಸ್‌ ಸಿಲಿಂಡರ್‌ ಹಾಗೂ ಮನೆ ಸಾಮಗ್ರಿಗಳು , ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಅಟೊ ರಿಕ್ಷಾವನ್ನು (ಅಂದಾಜು ಮೌಲ್ಯ 1.5 ಲಕ್ಷ) ವಶಪಡಿಸಿಕೊಳ್ಳಲಾಗಿದೆ ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2.85 ಲಕ್ಷ ಎಂದು ಅಂದಾಜಿಸಲಾಗಿದೆ.

ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕ ಯತೀಶ್‌ ಎನ್‌ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಜೇಂದ್ರ ಡಿ ಎಸ್‌ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.‌ ವಿಜಯ ಪ್ರಸಾದ್‌ ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕ ನಾಗರಾಜ್‌ ಹೆಚ್‌.ಇ.ಯವರ ನೇತ್ರತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ವಿದ್ಯಾ ಕೆ.ಜೆ. ರತ್ನಕುಮಾರ್‌, ಕೌಶಿಕ್‌ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ,ರಕ್ಷೀತ್‌ ರೈ, ಶ್ರೀಧರ ಸಿ ಎಸ್‌, ಕೃಷ್ಣ ನಾಯ್ಕ್‌, ಗದಿಗೆಪ್ಪ ಕಲ್ಲೂರ, ಶಂಕರ ಶಂಶಿ, ಮನೋಜ್‌, ಸತೀಶ್‌ , ಗಣಕಯಂತ್ರ ವಿಭಾಗದ ಸಂಪತ್‌, ದಿವಾಕರ್‌ ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ಭಾಗವಹಿಸಿರುತ್ತಾರೆ.