ಡೈಲಿ ವಾರ್ತೆ: 30/OCT/2024

ಜೆಸಿಐ ಭಾರತದ ಪ್ರತಿಷ್ಠಿತ ವಲಯ 15ರ ವಲಯ ಅಧ್ಯಕ್ಷರಾಗಿ ಜೆಸಿ ಅಭಿಲಾಶ್ ಬಿ.ಎ. ಆಯ್ಕೆ

ಕುಂದಾಪುರ: ಜೆಸಿಐ ಭಾರತದ ಪ್ರತಿಷ್ಠಿತ ವಲಯ 15ರ ವಲಯ ಅಧ್ಯಕ್ಷರಾಗಿ ಜೆಸಿಐ ಕುಂದಾಪುರ ಸಿಟಿಯ ಪೂರ್ವ ಅಧ್ಯಕ್ಷರಾದ ಜೆಸಿ ಅಭಿಲಾಶ್ ಬಿ ಎ ರವರು ಆಯ್ಕೆಯಾಗಿದ್ದಾರೆ.

ಕಾಪುವಿನ ಪ್ಯಾಲೆಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆದ 2024ರ ಸಾಲಿನ ವಲಯ ಸಮ್ಮೇಳನದಲ್ಲಿ ವಲಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿ ಈ ಹುದ್ದೆಗೆ ಏರಿದರು

2016 ರಲ್ಲಿ ಜೆ ಸಿ ಐ ಕುಂದಾಪುರ ಸಿಟಿ ಘಟಕದ ಮೂಲಕ ಜೇಸಿ ಆಂದೋಲನಕ್ಕೆ ಸೇರಿದ ಇವರು ಘಟಕದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2022 ರಲ್ಲಿ ಘಟಕ ಅಧ್ಯಕ್ಷರಾದರು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಲವಾರು ಸಾಧನೆಗಳ ಮೈಲುಗಲ್ಲನ್ನು ನೆಟ್ಟು ವಲಯ ಹಾಗೂ ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಮನ್ನಣೆಗೆ ಭಾಜನರಾಗಿದ್ದಾರೆ. ವಲಯದಲ್ಲಿ ವಲಯ ಉಪಾಧ್ಯಕ್ಷರಾಗಿ ನಂತರ ವಲಯದ ಆಡಳಿತ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ವಲಯ 15ರ ಎಲ್ಲಾ ಜೇಸಿಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಮೆಸ್ಕಾಂನ ಕುಂದಾಪುರ ವಿಭಾಗದ ನೌಕರರಾಗಿರುವ ಇವರು ವಿಭಾಗದ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.