ಡೈಲಿ ವಾರ್ತೆ: 01/NOV/2024
–ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ರಾಜ್ಯ ವಿಶೇಷ ಪ್ರಧಾನ ವರದಿಗಾರರು. ಬೆಂಗಳೂರು.
” ರಾಜ್ಯದಲ್ಲಿ ತಾಂಡವಾಡುತ್ತಿದ್ದ ಜಾತಿ ಅಸ್ಪರ್ಶತೆಗೆ ಕೋರ್ಟ್ ಚಾಟಿ ಏಟು….!” ಹತ್ತು ವರ್ಷದ ಹಳೆಯ ಪ್ರಕರಣ ಮರು ಜೀವ….!” ಒಂದೇ ಗ್ರಾಮದ 98 ಮಂದಿಗೆ ಜೀವಾವಧಿ ಶಿಕ್ಷೆ…!” ದೇಶದ ಇತಿಹಾಸದಲ್ಲೇ ಐತಿಹಾಸಿಕ ತೀರ್ಪು….!” ಕೊಪ್ಪಳದ ಮರಕುಂಬಿ ಗ್ರಾಮದಲ್ಲಿ ಸ್ಮಶಾನ ಮೌನ….!” 2014ರಲ್ಲಿ ನಡೆದ ಘಟನೆ.. 2024ಕ್ಕೆ ಮಹತ್ವದ ತೀರ್ಪು..!” ಘಟನೆಯ ಮೇಲುಕುಗೊಳಿಸಿದ ಆ ಹತ್ತು ವರ್ಷ…..!”
ಆರಂಭವಾಗಲಿದ್ದು, ಕೃಷಿಕರು ಹಾಗೂ ಕೂಲಿ ದುಡಿಯುವವರು ಚಿಂತೆಗೀಡಾಗಿದ್ದಾರೆ. ಗ್ರಾಮದಲ್ಲಿ ಭಿಗಿ ಭದ್ರತೆಗಾಗಿ ಪೊಲೀಸರು ಬಿಡು ಬಿಟ್ಟಿದ್ದಾರೆ. ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಭಣಗುಡುತ್ತಿದೆ. ಹಾಜರಾತಿ ಅರ್ಧಕ್ಕೆ ಕುಸಿದಿದೆ.
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಮೂವರು ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಐತಿಹಾಸಿಕ ಪ್ರಕರಣಕ್ಕೆ ಮಹತ್ತರ ತೀರ್ಪು :-
ಕಳ್ಳತನ ಪ್ರಕರಣದಲ್ಲಿ ದರುಡೆ ಪ್ರಕರಣದಲ್ಲಿ 10, 15 ಜನರನ್ನ ಬಂಧಿಸುವುದು ವಾಡಿಕೆ.., ಆದರೆ ಈ ಪ್ರಕರಣ ಎಷ್ಟು ತೀವ್ರತೆ ತೆಗೆದುಕೊಂಡಿದೆ ಎಂದರೆ ಬರೋಬರಿ 98 ಜನರನ್ನ ಜೀವಾವಧಿ ಶಿಕ್ಷೆಯನ್ನು ನೀಡಿರುವುದು ಆಶ್ಚರ್ಯ ಸಂಗತಿಯಾಗಿದೆ. 98 ಕುಟುಂಬಗಳು ನರಕ ಸದಸ್ಯ ಜೀವನ ನಡೆಸುವಂತಹ ಪಾಡಿಗೆ ನಿಂತಿದೆ. ಯಾರೋ ಮಾಡಿದ ತಪ್ಪಿಗೆ ಕುಟುಂಬಸ್ಥರು ಜೀವ ತೆತ್ತಬೇಕಾಗಿದೆ.
ದೇಶದಲ್ಲಿ ಇನ್ನೂ ಕೊನೆಗೊಳ್ಳದ ಜಾತಿ ಸಂಘರ್ಷ… ದಲಿತರ ಮೇಲೆ ದೌರ್ಜನ್ಯ.., ಗುಡಿಸಿಲಿಗೆ ಬೆಂಕಿ…., ಹತ್ತು ವರ್ಷಗಳ ಹಿಂದೆ ನಡೆದ ಘಟನೆಗೆ ಈ ಬಾರಿ ಶಿಕ್ಷೆ…!’ 2014ರಲ್ಲಿ ನಡೆದ ಪ್ರಕರಣ…. 2024ಕ್ಕೆ ಮಹತ್ವದ ತೀರ್ಪು… ಘಟನೆ ನಡೆದ ಆ 10 ವರುಷಗಳು…!”but, ದೇಶದ ಇತಿಹಾಸದಲ್ಲೇ ಒಂದೇ ಗ್ರಾಮದ 98 ಮಂದಿಗೆ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಹಾಕಿದೆ. ಕುಟುಂಬ ವರ್ಗಗಳು ಕಂಗಾಲಾಗಿ ಕಣ್ಣೀರು ಹಾಕುತಿದೆ. ಕಳೆದ ಹತ್ತು ವರ್ಷಗಳ ಹಿಂದೆ ಇಡೀ ಗ್ರಾಮವೇ ಹೊತ್ತಿ ಉರಿದಿದ್ದು… ದಲಿತರನ್ನ ವಿಶೇಷವಾಗಿ ಗೌರವಿಸುವ ಬದಲಾಗಿ,ಅಸ್ಪರ್ಶತೆಯಿಂದ ನೋಡಲಾಗಿತ್ತು,so, ದಲಿತರಿಗೆ ಹೋಟೆಲ್ ದೇವಸ್ಥಾನ, ಇನ್ನಿತರ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶವನ್ನು ನಿಷೇಧಿಸಿತ್ತು. ದಲಿತರನ್ನ ಕಂಡರೆ ಹೂಗಳತೆಯ ದೂರದಲ್ಲಿ ಮಾತನಾಡುವ ಗೋಜಿಗೂ ಹೋಗುತ್ತಿರಲಿಲ್ಲ, ದಲಿತರನ್ನ ಸಮಾಜದಲ್ಲಿ ತುಳಿಯುವಂತಹ ಪ್ರಯತ್ನ ನಡೆಯುತ್ತಲೇ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯೇ ಇದೀಗ ಬೆಳಕಿಗೆ ಬಂದಿದೆ. ಹೌದು ಸ್ನೇಹಿತರೆ…, ಈ ಬಾರಿಯ ವಿಶೇಷ ಲೇಖನದಲ್ಲಿ ಮಹತ್ವ ಸುದ್ದಿ ಒಂದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದೇವೆ. ದೇಶದ ಮತ್ತು ರಾಜ್ಯದ ಇತಿಹಾಸದಲ್ಲಿ ಈ ರೀತಿಯಾದಂತಹ ಪ್ರಕರಣ ಎಂದು ನೋಡಿರಲಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ಮಂಜುನಾಥ್ ಎನ್ನುವಂತಹ ವ್ಯಕ್ತಿ ಸಿನಿಮಾ ಥಿಯೇಟರಿಗೆ ಸಿನಿಮಾವನ್ನು ನೋಡಲು ಹೋಗಿದ್ದರು, ಟಿಕೆಟ್ ನೀಡುವ ವಿಚಾರದ ಕಾರಣದಿಂದಾಗಿ ಗುಂಪೊಂದು ಇವರ ಮೇಲೆ ಖ್ಯಾತೆ ತೆಗೆದಿದೆ. ಅಷ್ಟಕ್ಕೂ ಸುಮ್ಮನಾಗದ ತಂಡ ಇವರ ಗಲ್ಲಿಗಳಿಗೆ ನುಗ್ಗಿ, ಮನೆ ಚೋಪ್ಡಿಗಳಿಗೆ ಬೆಂಕಿ ಹಚ್ಚಿ ದ್ವಂಶಗೊಳಿಸಿತು. ಹಿಂದೆ ಮುಂದೆ ನೋಡದ ಮಂಜುನಾಥ್ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮಹತ್ತರ ಕೇಸನ್ನ ದಾಖಲಿಸಿದರು. ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಹತ್ತು ವರ್ಷಗಳ ಕಾಲ ನಿರಂತರವಾಗಿ ಸಾಧ್ಯತೆಗಳನ್ನ ತಪ್ಪು ಸರಿಗಳನ್ನ ಮೆಲುಕು ಹಾಕಿದ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶವನ್ನು ಹೊರ ಹಾಕಿತು. ಆದರೆ ಪ್ರಕರಣವನ್ನ ದಾಖಲಿಸಿದ ಮಂಜುನಾಥ್ ಇದೀಗ ಜೀವಂತ ಇಲ್ಲದಿದ್ದರೂ…, ಪ್ರಕರಣ ಜೀವಂತವಾಗಿ ಸಾಗುತ್ತಿರುವುದು ಅವರ ಕುಟುಂಬಕ್ಕೆ ನೆಮ್ಮದಿತರಿಸಿದೆ.
ಜಾತಿ ಸಂಘರ್ಷಕ್ಕೆ ಇಡೀ ಗ್ರಾಮವೇ ಸ್ಮಶಾನ ಮೌನ :-
98 ಆರೋಪಿಗಳಿಗೆ ಏಕಕಾಲಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿರುವುದರಿಂದ ಈ ತೀರ್ಪು ಅಪರೂಪದ ಪ್ರಕರಣವಾಗಿದೆ. ಹಲವು ಸಂತ್ರಸ್ತರ ಕುಟುಂಬ ಸದಸ್ಯರು ಕಳೆದ ಹತ್ತು ವರ್ಷಗಳಿಂದ ಈ ತೀರ್ಪಿಗಾಗಿ ಕಾಯುತ್ತಿದ್ದರು. ಸೋಮವಾರ ಒಟ್ಟು 101 ಆರೋಪಿಗಳನ್ನು ಬಂಧಿಸಲಾಗಿದ್ದು, ತೀರ್ಪನ್ನು ಅಕ್ಟೋಬರ್ 24ಕ್ಕೆ ಕಾಯ್ದಿರಿಸಲಾಗಿತ್ತು. 117 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 101 ಮಂದಿಗೆ ಶಿಕ್ಷೆ ವಿಧಿಸಲಾಗಿದ್ದು, 16 ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಸಂಪೂರ್ಣ ಪ್ರಕರಣದ ಸಾರಾಂಶ:-
ಇನ್ನುಳಿದಂತೆ ಮೂವರು ಅಪರಾಧಿಗಳು ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್‌ನಲ್ಲಿ ಐದು ವರ್ಷ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ತೀರ್ಪು ಪ್ರಕಟವಾದಾಗ, 98 ಅಪರಾಧಿಗಳ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ದುಃಖದಲ್ಲಿ ಅಳತೊಡಗಿದರು, ಆದರೆ ಸಂತ್ರಸ್ತರ ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಮರುಕುಂಬಿ ಪ್ರಕರಣದ 98 ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿರುವುದು ಸಂತಸ ತಂದಿದೆ ಎಂದು ಕೊಪ್ಪಳದ ಮಂಜುನಾಥ್ ಕೆ, ರಮೇಶ್ ಕೋಳೂರು ಮತ್ತಿತರ ದಲಿತ ಮುಖಂಡರು ತಿಳಿಸಿದ್ದಾರೆ. “ನಾವು ಹತ್ತು ವರ್ಷಗಳಿಂದ ಈ ತೀರ್ಪಿಗಾಗಿ ಕಾಯುತ್ತಿದ್ದೆವು. ಘಟನೆಯ ನಂತರ ಹಲವು ದಲಿತ ಮುಖಂಡರು ಕುಟುಂಬಗಳಿಗೆ ಬೆಂಬಲ ನೀಡಿದ್ದು, ಸಂತ್ರಸ್ತರ ಕುಟುಂಬದ ಸದಸ್ಯರೂ ಈತೀರ್ಪಿನಿಂದ ಸಂತಸಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 28, 2014 ರಂದು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರದಲ್ಲಿ ಇದೇ ಮರಕುಂಬಿ ಗ್ರಾಮದ ದಲಿತ ಸಮುದಾಯದ ಮಂಜುನಾಥ ಮತ್ತು ಸ್ನೇಹಿತರು ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯೋ ವಿಚಾರದಲ್ಲಿ ಸವರ್ಣೀಯರು ಜಗಳ ಆರಂಭಿಸಿದ್ದರು. ಅಂದು ಸಂಜೆ ಗ್ರಾಮದ ಸವರ್ಣೀಯರು ಇದೇ ವಿಚಾರದ ನೆಪದ ಮೇಲೆ ದಲಿತರ ಮನೆಗಳಿಗೆ ನುಗ್ಗಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. 2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ದಲಿತರ ಗುಡಿಸಲುಗಳಿಗೆ ಇತರ ಸಮುದಾಯದ ಕೆಲವರು ಬೆಂಕಿ ಹಚ್ಚಿದ್ದರು.ಅನೇಕ ದಲಿತ ಮುಖಂಡರು ಕೊಪ್ಪಳ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದರು.
2014 ರಲ್ಲಿ, ಮರುಕುಂಬಿ ಗ್ರಾಮದ ದಲಿತ ನಿವಾಸಿಗಳ ಪ್ರದೇಶಕ್ಕೆ ನೂರಾರು ಜನರು ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದರು, ಘರ್ಷಣೆ ಭುಗಿಲೆದ್ದಿತು ಮತ್ತು ದಲಿತರಿಗೆ ಬೆಂಕಿ ಹಚ್ಚಲಾಯಿತು. ಗ್ರಾಮದ ಕ್ಷೌರಿಕ ಅಂಗಡಿ ಮತ್ತು ಹೋಟೆಲ್‌ಗಳಿಗೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದೇ ಘರ್ಷಣೆಗೆ ಕಾರಣ ಎನ್ನಲಾಗಿದೆ. ಮೂರು ತಿಂಗಳಿನಿಂದ ಮರುಕುಂಬಿ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಒಟ್ಟಾರೆಯಾಗಿ ಪ್ರಕರಣ ಸ್ವತಂತ್ರಗೊಂಡಿದ್ದು ದಲಿತರ ಮೇಲೆ ನಡೆಯುವ ದೌರ್ಜನ್ಯ ತಡೆಯುವಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸುತ್ತವೆ. ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕಿದೆ. ಅದಲ್ಲದೆ ಬಂಧಿತವಾದ ಕುಟುಂಬಕ್ಕೆ ಸರ್ಕಾರವೇ ಸಹಾಯ ಹಸ್ತವನ್ನು ಚಾಚ ಬೇಕೆನ್ನು ಪತ್ರಿಕೆಯ ಅಗ್ರಹಾರವಾಗಿದೆ.