ಡೈಲಿ ವಾರ್ತೆ: 09/NOV/2024
ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ಸಾಮಾನ್ಯ ಸಭೆ ಶುಕ್ರವಾರ ಸಾಲಿಗ್ರಾಮ. ಪ. ಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.
ಬ್ರಹ್ಮಾವರದಿಂದ ಕುಂದಾಪುರದ ಭಾಗದವರೆಗೆ ಹಾದು ಹೋಗಿರುವ ಪ್ರಸ್ತುತ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಭಾಗಗಳ ಕೃಷಿ ಭೂಮಿ ಸೇರಿದಂತೆ ಮನೆ ವಾಸ್ತವ್ಯವಿರುವ ಪ್ರದೇದಲ್ಲಿರುವ ಅನಧಿಕೃತ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಸದಸ್ಯರಾದ ರಾಜು ಪೂಜಾರಿ ಸಭೆಯಲ್ಲಿ ಗಮನ ಸೆಳೆದರಲ್ಲದೆ ರಸ್ತೆ ಸಂಪರ್ಕವಿಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕುರಿತು ಉಪಸ್ಥಿತರಿದ್ದ ಮೆಸ್ಕಾಂ ಇಂಜಿನಿಯರ್‌ಗಳಲ್ಲಿ ಮಾಹಿತಿ ಕೇಳಿದರು ಈ ಬಗ್ಗೆ ಮೆಸ್ಕಾ ಶೀಘ್ರದಲ್ಲಿ ಹಳೆಯ ತಂತಿಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಿದೆ ಅಲ್ಲದೆ ವಿದ್ಯುತ್ ಸಂಪರ್ಕದ ಕುರಿತು ಮುಖ್ಯಾಧಿಕಾರಿಗಳ ಅವಗಾಹನೆಗೆ ಬಿಟ್ಟ ವಿಚಾರವಾಗಿದೆ ಎಂದು ಮೆಸ್ಕಾಂ ಪ್ರಶಾಂತ್ ಶೆಟ್ಟಿ ಉತ್ತರಿಸಿದರು.
ಮುಖ್ಯಾಧಿಕಾರಿ ಮಾತನಾಡಿ ವಿದ್ಯುತ್ ಸಂಪರ್ಕದ ಕುರಿತು ಈ ಬಗ್ಗೆ ಆಡಳಿತಾತ್ಮಕವಾಗಿ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅನಧಿಕೃತ ಬಿದ್ದ ಅಥವಾ ಮನೆಗಳಿಗೆ ಹಾನಿಯಾಗಲಿರುವ ಮರಗಳನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲು ಸಭೆ ಆಗ್ರಹಿಸಿತು.
ಹೊಸದಾಗಿ ಮುಖ್ಯಾಧಿಕಾರಿ ನೇಮಕಗೊಂಡಿದ್ದಿರಿ ಕೆಲ ಅಧಿಕಾರಿವರ್ಗದವರನ್ನು ಬದಲಾವಣೆಗೊಳಿಸುವಂತೆ ವಿಪಕ್ಷನಾಯಕ ಶ್ರೀನಿವಾಸ್ ಅಮೀನ್ ಗಮನ ಸೆಳೆದರಲ್ಲದೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಮೊಬೈಲ್ ಟವರ್ ಎಷ್ಟಿವೆ ಅದರಿಂದ ಆದಾಯ ಏನು ಎಂದು ಪ್ರಶ್ನಿಸಿ ಕಾರ್ಯನಿರ್ವಹಿಸದ ಟವರ್ ಗಳನ್ನು ತೆರವುಗೊಳಿಸಲು ಕ್ರಮಕ್ಕೆ ಆಗ್ರಹಿಸಿದರು.
ಈ ಬಗ್ಗೆ ಶೀಘ್ರದಲ್ಲಿ ಸಮಿತಿ ರಚಿಸಿ ಅಂಕಿಅಂಶಗಳನ್ನು ಕಲೆಹಾಕಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕಸವಿಲೇವಾರಿದ್ದೆ ಚರ್ಚೆ:
ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಘನ ಹಾಗೂ ದ್ರವ ತ್ಯಾಜ್ಯ ಘಟಕ ಜಡ್ಡು ಗಟ್ಟಿದೆ, ವೆಸ್ಟೇಜ್ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ಘಟಕ ನಿರ್ಮಾಣಕ್ಕೆ ಉಳ್ತೂರು ಸ್ಥಳ ಖರೀದಿಸಿ ಪ್ರಯೋಜನಕ್ಕಿಲ್ಲದಾಗಿದೆ, ಪಾರಂಪಳ್ಳಿ ಘಟಕ ಅಭಿವೃದ್ಧಿಗೊಳಿಸುವ ಬಗ್ಗೆ ನಾವುಗಳು ಚರ್ಚಿಸುತ್ತಿದ್ದೇವೆ ಇದರ ಬಗ್ಗೆ ಸಂಸದ, ಶಾಸಕರ ಸಭೆ ಕರೆದು ಸಾಧಕ ಭಾದಕ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಿ ಪಟ್ಟಣಪಂಚಾಯತ್ ಒಕ್ಕೂರಲವಾಗಿ ಆಗ್ರಹಿಸಿತು.
ಈ ಬಗ್ಗೆ ಮುಖ್ಯಾಧಿಕಾರಿ ಮಾಹಿತಿ ನೀಡಿ ನಾನು ಅಧಿಕಾರಿ ಸ್ವೀಕರಿಸಿ ಕೆಲ ದಿನಗಳಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಭರವಸೆ ನೀಡಿದರು.
ಕುಡಿಯುವ ನೀರಿನ ಬಗ್ಗೆ ತಾತ್ಸಾರ ಮಾಡಬೇಡಿ:
ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಪ್ರದೇಶದಲ್ಲಿ ಬೇಸಿಗೆ ಅಥವಾ ಇನ್ನಾವ ಸಂದರ್ಭದಲ್ಲೂ ಕುಡಿಯುವ ನೀರು ಸೇರಿದಂತೆ ಪ್ರತಿಯೊಂದು ಮೂಲಸೌಕರ್ಯ ವಿಚಾರಗಳಲ್ಲಿ ಕೆಳ ವರ್ಗದ ಅಧಿಕಾರಿಯಾಗಿ ತಾತ್ಸಾರ ಧೋರಣೆ ಸಲ್ಲ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಪಟ್ಟಣಪಂಚಾಯತ್ ಗಮನಕ್ಕೆ ತಂದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿದ್ದೇವೆ ಎಂದು ಪಟ್ಟಣಪಂಚಾಯತ್ ಕಾಂಗ್ರೆಸ್ ಸದಸ್ಯ ಪುನಿತ್ ಪೂಜಾರಿ ಪ್ರಶ್ನೆಗೆ ಉತ್ತರಿಸಿದರು.
ಪಟ್ಟಣಪಂಚಾಯತ್ ಒಳ ರಸ್ತೆ ಅಥವಾ ಹೆದ್ದಾರಿ ಸರ್ವಿಸ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಖಡಕ್ ಸೂಚನೆ ನೀಡಿದ್ದು ಒಳಪೇಟೆಯಲ್ಲಿ ಜನಸಾಮಾನ್ಯರಿಗೆ ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದಂತೆ ಆಪರೇಷನ್ ಪುಟ್ ಬಾತ್ ಯೋಜನೆ ಮಾಡಲಿದ್ದೇವೆ ಇದಕ್ಕಾಗಿ ಪೋಲಿಸ್ ಇಲಾಖೆಯ ಸಹಕಾರ ಕೊರಿದರು.
ಅನಧಿಕೃತ ನಳ್ಳಿ , ರಾಷ್ಟ್ರೀಯ ಹೆದ್ದಾರಿ ಅಂಗಡಿ, ಟವರ್, ಜಾಹಿರಾತು ಫಲಕಗಳ ಬಗ್ಗೆ ಗುರುತು ಪತ್ತೆ ಹಚ್ಚಿ ತೆರಿಗೆ ವಸೂಲಾತಿ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಶೂನ್ಯವೇಳೆಯಲ್ಲಿ ಸಭೆಯಲ್ಲಿ ಪ್ತಾಸ್ತಾಪಿಸಿದರು.
ಪಟ್ಟಣಪಂಚಾಯತ್ ಅಭಿವೃದ್ಧಿಯಾಗಬೇಕಾದರೆ ಒಳಚರಂಡಿ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ ಗಮನ ಸೆಳೆದರು ಈ ಬಗ್ಗೆ ಮುಖ್ಯಾಧಿಕಾರಿಗಳು ಸ್ಥಳದ ಅವಶ್ಯಕತೆ ,ಜನಸಾಮಾನ್ಯರ ಬೆಂಬಲದೊಂದಿಗೆ ಈ ಕಾರ್ಯ ಅನುಷ್ಠಾನಗೊಳ್ಳಬೇಕಿದೆ ಎಂದರು.
ಇನ್ನುಳಿದಂತೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಒಲಸೆ ಕಾರ್ಮಿಕರು ಹೆಚ್ಚಿರುವುದರಿಂದ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಮುಖ್ಯಾಧಿಕಾರಿಗಳು ಸಂಬಂಧಿಸಿದ ಸ್ಥಳ ಗುರುತು ಪತ್ತೆ ಹಚ್ಚಿ ಮುಂದಿನ ಕ್ರಮದ ಭರವಸೆ ನೀಡಿದರು.
ಪಟ್ಟಣಪಂಚಾಯತ್ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.