ಡೈಲಿ ವಾರ್ತೆ:01/DEC/2024

ಅಕ್ರಮ ಸಕ್ರಮ ಭೂಮಿ ರಿಯಲ್ ಎಸ್ಟೇಟ್ ಗಳ ಪಾಲು – ಕೋಟ ನಾಗೇಂದ್ರ ಪುತ್ರನ್ ಆರೋಪ

ಜಯಪ್ರಕಾಶ್ ಹೆಗ್ಡೆ ಅವರು ಮೀನುಗಾರಿಕೆ ಸಚಿವರಾಗಿದ್ದಾಗ ಕೃಷಿಕರ ಮೇಲೇರುವ ಕಾಳಜಿಯಿಂದ ಅಕ್ರಮ ಸಕ್ರಮ ಭೂಮಿಯನ್ನು ಸರ್ಕಾರದ ಒಪ್ಪಿಗೆ ಮುಖಾಂತರ ನೂರಾರು ಕೃಷಿ ಕುಟುಂಬಕ್ಕೆ ಭೂಮಿ ಹಂಚಿಕೆ ಮಾಡಿದ್ದರು. ಸಾವಿರಾರು ಕುಟುಂಬಗಳಿಗೆ ಕೃಷಿಯಿಂದ ಅನುಕೂಲವಾಗಲೆಂದು ಅಕ್ರಮ ಸಕ್ರಮದ ಸರಕಾರದ ಕಾನೂನು ಮೂಲಕ ನೂರಾರು ಕುಟುಂಬಕ್ಕೆ ಭೂಮಿ ಸಿಗುವ ಹಾಗೆ ಮಾಡಿದ್ದರು, ಆದರೆ ಇವತ್ತಿನ ದಿನಗಳಲ್ಲಿ ಅಕ್ರಮ ಸಕ್ರಮದಲ್ಲಿ ಕೃಷಿ ಭೂಮಿ ಎಂದು ಪಡೆದುಕೊಂಡು ಕೃಷಿಗೆ ಉತ್ತೇಜನ ಕೊಡುವುದನ್ನು ಬಿಟ್ಟು ಈಗ ಭೂಮಿಯನ್ನು ಮಾರಾಟ ಮಾಡಿ,ಕೆಲವರು ಎಕರೆ ಗಟ್ಟಲೆ ಭೂಮಿಯನ್ನು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಭೂಮಿ ಮಾರಾಟ ಮಾಡಿಕೊಂಡು ಕೋಟಿಗಟ್ಟಲೆ ಹಣ ಮಾಡುತ್ತಿದ್ದು, ಇದನ್ನು ಸರಕಾರ ಕೂಡಲೇ ಅಕ್ರಮ ಸಕ್ರಮ ಭೂಮಿ ಕೃಷಿಗೆ ಮಾತ್ರ, ಮಾರಾಟಕ್ಕೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಲ್ಲ ಎಂದು ಸರ್ಕಾರ ಆದೇಶ ಮಾಡಬೇಕು ಎಂದು ನಾಗೇಂದ್ರ ಪುತ್ರನ್ ಹೇಳಿದರು.

ಜಯಪ್ರಕಾಶ್ ಹೆಗ್ಡೆ ಅವರ ದೂರ ದೃಷ್ಟಿಯಿಂದ ರೈತರಿಗೆ ಅನುಕೂಲವಾಗಿ ಕೃಷಿ ಅಭಿವೃದ್ಧಿಯಾಗಿ ರೈತಪಿ ಕುಟುಂಬಕ್ಕೆ ಹಾಗೂ ಜನತೆಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಅಕ್ರಮ ಸಕ್ರಮ ವಾಗಿ ಸರಕಾರಿ ಭೂಮಿ ನೀಡಲು ನಿರ್ಧರಿಸಿರುದು, ಮತ್ತು ಜಯಪ್ರಕಾಶ್ ಹೆಗ್ಡೆ ಅವರ ಕನಸು ಕ್ಷೇತ್ರದ ಜನತೆ ಸಾಗುವಾಳಿ ಕೃಷಿ ಮಾಡಿಕೊಂಡು ರೈತರ ಕುಟುಂಬ ನೆಮ್ಮದಿಯಿಂದ ಇರಲಿ ಎಂದು ಅವರು ಹಾರೈಸಿದರೆ, ಇಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಅಕ್ರಮ ಸಕ್ರಮ ಭೂಮಿಯನ್ನೇ ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದಾರೆ.

ಆದ್ದರಿಂದ ಸರಕಾರ ಕೂಡಲೆ ಅಕ್ರಮ ಸಕ್ರಮ ಭೂಮಿಯನ್ನು ದುರಾಸೆ ಮೂಲಕ ಮಾರಾಟ ಮಾಡಿಕೊಂಡಿರುವವರ ಬಗ್ಗೆ ಗಮನ ಹರಿಸಿ, ಅಕ್ರಮ ಸಕ್ರಮದ ಎಲ್ಲ ಭೂಮಿಯನ್ನು ರೈತರಿಗೆ ಮಾತ್ರ ಮತ್ತು ಕೃಷಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಹಾಗೂ ಈಗಲೇ ಅಕ್ರಮ ಸಕ್ರಮ ಭೂಮಿ ರಿಯಲ್ ಎಸ್ಟೇಟ್ ಸೈಟ್ ಗಳಾಗಿ ಮಾರಾಟ ಮಾಡಿರುದನ್ನು ಸರಕಾರ ಹಿಂಪಡೆದು ಕೊಂಡು ರೈತಾಪಿ ಕುಟುಂಬಕ್ಕೆ ಮತ್ತು ಕೃಷಿ ಉದ್ಯೋಗ ಮಾಡುವವರಿಗೆ ಬೆಂಬಲಿಸ ಬೇಕು ಎಂದು ಕರ್ನಾಟಕ ಸರಕಾರದ ಬಡವರ, ರೈತರ, ಹಿಂದುಳಿದ ವರ್ಗದ ಜನತೆಯ, ಸಮಾಜದ ಕಟ್ಟ ಕಡೆಯ ಸಮುದಾಯಗಳ,ದೀನ ದಲಿತರ ಪಾಲಿಗೆ ಆಶಾಕಿರಣ ಆಗಿರುವಂತ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಗಮನಕ್ಕೆ ತರಲು ಬಯಸುತ್ತಾ ಇದ್ದೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.