ಡೈಲಿ ವಾರ್ತೆ:01/DEC/2024
ತೆಕ್ಕಟ್ಟೆ: ಖಾಸಗಿ ಬಸ್ ಡಿಕ್ಕಿ – ಪಾದಚಾರಿ ಸಾವು
ಕೋಟ: ಖಾಸಗಿ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.1 ರಂದು ಭಾನುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರ ತೆಕ್ಕಟ್ಟೆ ಸಮೀಪ ಕನ್ನುಕೆರೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಕುಂಭಾಸಿ ಕೊರಗ ಕಾಲೋನಿಯಾದ ಆನಂದ ಎಂದು ಗುರುತಿಸಲಾಗಿದೆ.
ಆನಂದ ಅವರು ಏಕಾಏಕಿ ರಸ್ತೆ ದಾಟುತ್ತಿದ್ದಾಗ ಕುಂದಾಪುರ ದಿಂದ ಉಡುಪಿ ಕಡೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆನಂದ ಅವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಕೋಟ ಪೊಲೀಸ್ ಠಾಣಾ ಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.
ಮೃತದೇಹ ವನ್ನು ಜೀವನ್ ಮಿತ್ರ ನಾಗರಾಜ್ ಪುತ್ರನ್ ಆಂಬುಲೆನ್ಸ್ ನಲ್ಲಿ ಕುಂದಾಪುರ ಶವಗಾರಕ್ಕೆ ಸಾಗಿಸಿರುತ್ತಾರೆ.