ಡೈಲಿ ವಾರ್ತೆ:03/DEC/2024
ಬ್ರಹ್ಮಾವರ: ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿ
ಬ್ರಹ್ಮಾವರ : ಫೆಂಗಲ್ ಸೈಕ್ಲೋನ್ ಪರಿಣಾಮವಾಗಿ ಸುರಿದ ಭಾರಿ ಮಳೆಗೆ ನೀಲಾವರ ಸಮೀಪದ ಸೊಣಗಾರಬೆಟ್ಟು ರಾಧು ಶೆಡ್ತಿಯವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಸೊಣಗಾರ ಬೆಟ್ಟು ನಲ್ಲಿ ನಿನ್ನೆ ರಾತ್ರಿ ಗುಡುಗು ಸಹಿತ ಮಳೆ ಸುರಿದ ವೇಳೆ ಘಟನೆ ಈ ಘಟನೆ ನಡೆದಿದೆ.
ಸಿಡಿಲ ರಭಸಕ್ಕೆ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಸಿಡಿಲು ಬಡಿದ ಪರಿಣಾಮ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ.