ಡೈಲಿ ವಾರ್ತೆ:04/DEC/2024
ವಿಟ್ಲ : ಆಟೋ ಚಾಲಕ ನಾಪತ್ತೆ-ದೂರು ದಾಖಲು
ವಿಟ್ಲ : ಆಟೋ ಚಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕ ಅವರ ಪುತ್ರ ಧನರಾಜ್( 28) ನಾಪತ್ತೆಯಾದ ಆಟೋ ಚಾಲಕ
ನವೆಂಬರ್ 28 ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಕ್ಕೆ ತನ್ನ ಅಟೋ ರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ಡಿ.
03 ರವರೆಗೂ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಸಂಬಂದಿಕರಲ್ಲಿ , ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾನೆ. ಧನರಾಜ್‌ನ ರಿಕ್ಷಾ ಮಾತ್ರ ಉಪ್ಪಿನಂಗಡಿಯಲ್ಲಿದ್ದು ಆತನ ಮೊಬೈಲ್ ನಂಬ್ರ 9008117093 ಸ್ವೀಚ್ ಆಫ್ ಆಗಿರುತ್ತದೆ. ಮನೆಗೂ ಬಾರದೆ ಸಂಭಂದಿಕರ ಹಾಗೂ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾದ ಧನರಾಜ್‌ನನ್ನು ಪತ್ತೆಮಾಡಿ ಕೊಡಬೇಕಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.