ಡೈಲಿ ವಾರ್ತೆ:07/DEC/2024
ಡಿ. 8 ರಂದು ಕೊರ್ಗಿ ವಿಠಲ ಶೆಟ್ಟಿ ಇವರಿಗೆ ನಾಗರಿಕ ಸಂಮಾನ
ಕುಂದಾಪುರ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಪರಿಸರವಾದಿ ಕೊರ್ಗಿ ವಿಠಲ ಶೆಟ್ಟಿ ಇವರಿಗೆ ಡಿ. 8 ರಂದು ಭಾನುವಾರ ನಾಗರಿಕ ಸಂಮಾನ ನಡೆಯಲಿದೆ ಎಂದು ಟ್ರಸ್ಟಿ ಡಾ. ಕಿರಣ್ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ. 8 ರಂದು ಭಾನುವಾರ ಸಂಜೆ 6 ಗಂಟೆಗೆ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಪರಿಸರವಾದಿ ಕೊರ್ಗಿ ವಿಠಲ ಶೆಟ್ಟಿ ಇವರಿಗೆ ನಾಗರಿಕ ಸಂಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ
ಕೃಷ್ಣಪ್ರಸಾದ ಅಡ್ಯಂತಾಯ ವಹಿಸಲಿದ್ದು.
ಹಿರಿಯ ಧಾರ್ಮಿಕ ಮುಖಂಡ ಬಸ್ರೂರು ಬಿ ಅಪ್ಪಣ್ಣ ಹೆಗ್ಡೆ ಇವರು ಸನ್ಮಾನಿಸಲಿದ್ದಾರೆ.
ಕಾರ್ಯಕ್ರಮವನ್ನು ಮಾಜಿ ಸಚಿವರಾದ ಕೆ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಬೆಳಿಗ್ಗೆ 9 ಗಂಟೆ ಯಿಂದ ಈ ಸಭಾಗೃಹದಲ್ಲಿ ಉಡುಪಿ ಆದರ್ಶ ಆಸ್ಪತ್ರೆಯ ನುರಿತ ವೈದ್ಯರಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಸಂಜೆ 4 ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ರಾತ್ರಿ 7:30 ರಿಂದ ಕಾಪಿಕಾಡ್ – ವಾಮಂಜೂರ್ ಅಭಿನಯದ ಹಾಸ್ಯಮಯ ನಾಟಕ “ಯಾರೂ ಗ್ಯಾರಂಟಿ ಇಲ್ಲ” ಪ್ರದರ್ಶನಗೊಳ್ಳಲಿದೆ ಎಂದು ಡಾ. ಕಿರಣ್ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ರಾಜಗೋಪಾಲ್ ಪುರಾಣಿಕ್, ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.