

ಡೈಲಿ ವಾರ್ತೆ:13/DEC/2024



ಕೋಟೇಶ್ವರದಲ್ಲಿ ಹ್ಯಾಪಿ ಡೇ ಐಸ್ ಕ್ರೀಮ್ ಲೋಕಾರ್ಪಣೆ: ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವುದು ಶ್ಲಾಘನೀಯ – ಕೃಷ್ಣ ಗೊಲ್ಲ

ಕುಂದಾಪುರ: ಹ್ಯಾಪಿ ಡೇ ಐಸ್ ಕ್ರೀಮ್ ನವರ ನೂತನ ಶಾಖೆಯು ಡಿ. 12 ರ ಗುರುವಾರ ಬೆಳಿಗ್ಗೆ ಕೋಟೇಶ್ವರ ಬಸ್ ನಿಲ್ದಾಣದ ಬಳಿಯ ಮಸ್ಜಿದ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿತು.

ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ ಅವರು ನೂತನ ಶಾಖೆಯನ್ನು ಉದ್ಘಾಟಿಸಿ,
ಸುಮಾರು 20 ವರ್ಷಗಳ ಹಿಂದೆ ಸಹೋದರರಿಬ್ಬರು ಸೇರಿ ನಿಹಾಲ್ ಹೆಸರಿನ ಐಸ್ ಕ್ರೀಮ್ ಸಂಸ್ಥೆಯನ್ನು ಹುಟ್ಟುಹಾಕಿ ಪ್ರಾಮಾಣಿಕತೆಯಿಂದ ವ್ಯವಹಾರ ನಡೆಸಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಜನಮನ ಗೆದ್ದ ಈ ಐಸ್ ಕ್ರೀಮ್ ಇಂದು “ಹ್ಯಾಪಿ ಡೇ” ಎನ್ನುವ ಹೊಸ ನಾಮಧೇಯದಿಂದ ಗ್ರಾಹಕರ ಮನಗೆಲ್ಲಲು ಸಜ್ಜಾಗಿದೆ. ಈ ನೂತನ ಐಸ್ ಕ್ರೀಮ್ ಶಾಖೆಯನ್ನು ಕೋಟೇಶ್ವರದಲ್ಲಿ ಆರಂಭಗೊಳಿಸಲು ಸಂತಸವಾಗುತ್ತಿದೆ.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ, ಆರೋಗ್ಯಪೂರ್ಣವಾದ, ವಿಶಿಷ್ಟ ಸ್ವಾದದ ಐಸ್ ಕ್ರೀಮ್ ನೀಡುವ ಉತ್ಸಾಹ ಈ ಸಹೋದರರಲ್ಲಿದೆ.
ಇಂದು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಐಸ್ ಕ್ರೀಮ್ ಸಂಸ್ಥೆಗಳು ಪೈಪೋಟಿ ನೀಡುವ ಈ ಕಾಲಘಟ್ಟದಲ್ಲಿ ಗ್ರಾಹಕರಿಗಾಗಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ “ಹ್ಯಾಪಿ ಡೇ” ಐಸ್ ಕ್ರೀಮ್ ನೀಡುತ್ತಿರುವುದು ಶ್ಲಾಘನೀಯ. ಇದು ಗ್ರಾಹಕರು ಮತ್ತು ಉತ್ಪಾದಕರನ್ನು ಸದಾ ಹ್ಯಾಪಿಯಾಗಿಡುವಂತಾಗಲಿ ಎಂದು ಶುಭಕೋರಿ ಮುಂದಿನ ದಿನಗಳಲ್ಲಿ ಹ್ಯಾಪಿ ಐಸ್ ಕ್ರೀಮ್ ನಾಡಿನಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು.

ಸಂಸ್ಥೆಯ ಮಾಲೀಕ ಮುದಾಸಿರ್ ರವರು ಪ್ರಸ್ತಾವಿಕ ಮಾತನಾಡಿ, 2004 ರಲ್ಲಿ ಮಾರ್ಕೊಡು ಶೇಖರ್ ಶೆಟ್ಟಿ ಅವರ ಕಟ್ಟಡದಲ್ಲಿ ನಿಹಾಲ್ ಐಸ್ ಕ್ರೀಮ್ ಎಂಬ ಸಂಸ್ಥೆಯನ್ನು ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿ ಇಂದಿಗೆ 20 ವರ್ಷ ಪೂರೈಸಿದೆ.
ಗ್ರಾಹಕಾರ ಪ್ರೊಸ್ತಾಹದಿಂದ ಬೆಳೆದ ನಿಹಾಲ್ ಐಸ್ ಕ್ರೀಮ್ ಸಂಸ್ಥೆಯ ಉತ್ಕೃಷ್ಟ ಉತ್ಪನ್ನಕ್ಕೆ ಇಂದು “ಹ್ಯಾಪಿ ಡೇ” ಎಂದು ಹೊಸ ನಾಮಕರಣ ಮಾಡಿ ಕೋಟೇಶ್ವರದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಿದ್ದೇವೆ.
ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಐಸ್ ಕ್ರೀಮ್ ನೀಡುವ ಉದ್ದೇಶವನ್ನು ಹೊಂದಿದ್ದು,
ಎರಡು ಅಥವಾ ಎರಡಕ್ಕಿಂತ ಹೆಚ್ಚು ಐಸ್ ಕ್ರೀಮ್ ಕೊಂಡಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವುದು. ಅಲ್ಲದೆ ಯಾವುದೇ ಸಭೆ ಸಮಾರಂಭಗಳಿಗೂ ಹೋಲ್ ಸೇಲ್ ದರದಲ್ಲಿ ಉತ್ತಮ ಗುಣಮಟ್ಟದ ಐಸ್ ಕ್ರೀಮ್ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಟೇಶ್ವರ ಸುಲ್ತಾನಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸತ್ತಾರ್, ಮಾಜಿ ಅಧ್ಯಕ್ಷ ಆಸೀಫ್, ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಖತ್ ಅಲಿ ಕೋಟ, ಪಂಚಾಯತ್ ಸದಸ್ಯ ಲೋಕೇಶ್ ಹಾಗೂ ಖಾಜಾ ಸಾಹೇಬ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಸೀಫ್ ಕನ್ನುಕೆರೆ ಇವರು ಸ್ವಾಗತಿಸಿ, ವಂದಿಸಿದರು.