

ಡೈಲಿ ವಾರ್ತೆ:14/DEC/2024



ಟೀಮ್ ಭವಾಬ್ಧಿ ವತಿಯಿಂದ
ಅಂಗನವಾಡಿಯ ಚಿಣ್ಣರಿಗೆ ಸಮವಸ್ತ್ರ ವಿತರಣೆ

ಕೋಟ: ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ವತಿಯಿಂದ ಡಿ. 14 ರಂದು ಶನಿವಾರ ಬೆಳಿಗ್ಗೆ ಪಾರಂಪಳ್ಳಿ ಪಡುಕರೆಯ ಅಂಗನವಾಡಿಯ ಹದಿನೇಳು ಚಿಣ್ಣರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಟೀಮ್ ಭವಾಬ್ಧಿಯ ಅಧ್ಯಕ್ಷ ಸಂತೋಷ ತಿಂಗಳಾಯ, ಉಪಾಧ್ಯಕ್ಷ ಉದಯ್ ಬಂಗೇರ, ಕಾರ್ಯದರ್ಶಿ ಭರತ್ , ಕೊಷಾಧಿಕಾರಿ ಶಿವಾನಂದ ಕುಂದರ್ , ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಉಪಾಧ್ಯಾಯ, ಅಂಗನವಾಡಿ ಶಿಕ್ಷಕಿ ನಾಗರತ್ನ , ಸಹಾಯಕಿ ಸುಶೀಲ, ಭವಾಬ್ಧಿಯ ಗೌರವ ಸಲಹೆಗಾರರಾದ ಗಣೇಶ್ ತಿಂಗಳಾಯ,ದೇವೇಂದ್ರ ಶ್ರೀಯಾನ್,ಕೌಷಿಕ್ ಜೋಗಿ
ಹಾಗು ಸದಸ್ಯರು , ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೇವೇಂದ್ರ ಶ್ರೀಯಾನ್ ಅವರು ನಿರೂಪಿಸಿ ನಿರ್ವಹಣೆ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗು ಸಿಹಿ ತಿಂಡಿ ವಿತರಣೆ ಮಾಡಲಾಯಿತು.