ಡೈಲಿ ವಾರ್ತೆ:17/DEC/2024

SDPI ಕಾಟಿಪಳ್ಳ 3ನೇ ವಾರ್ಡ್ ನ ನೂತನ ಕಛೇರಿ ಉದ್ಘಾಟನೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 3ನೇ ವಾರ್ಡ್ ಕಾಟಿಪಳ್ಳ ಇದರ ನೂತನ ಕಛೇರಿಯ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ SDPI ಕಾಟಿಪಳ್ಳ ವಾರ್ಡ್ ಕಾರ್ಯದರ್ಶಿ ಝೈನುದ್ದೀನ್ ರವರ ಅಧ್ಯಕ್ಷತೆಯಲ್ಲಿ ಎ.ಕೆ ಪ್ಲಾಝಾ ಕಾಟಿಪಳ್ಳದಲ್ಲಿ ನಡೆಯಿತು. ಬಹು: ಅಬ್ದುಲ್ ಖಾದರ್ ಮದನಿ ಉಸ್ತಾದ್ ಚೊಕ್ಕಬೆಟ್ಟು ರವರು ದುಆ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಕಾಟಿಪಳ್ಳ ಪ್ರದೇಶದ ನಾಗರಿಕರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದ 2 ವರ್ಷಗಳ ಹಿಂದೆ ರಾಜಕೀಯ ಷಡ್ಯಂತರದ ಮೂಲಕ ಸೀಝ್ ಮಾಡಿದ ಪಕ್ಷದ ಕಛೇರಿಗೆ ಪರ್ಯಾಯವಾಗಿ ನೂತನ ಕಛೇರಿಯನ್ನು ಲೋಕಾರ್ಪಣೆ ಮಾಡಿದ ವಾರ್ಡ್ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಅಭಿನಂದಿಸುತ್ತಾ ಪರ್ಯಾಯ ರಾಜಕೀಯಕ್ಕಾಗಿ SDPI ಜೊತೆ ಕೈ ಜೋಡಿಸಿರಿ ಎಂದು ಸರ್ವ ನಾಗರಿಕರಲ್ಲಿ ವಿನಂತಿಸಿದರು.


ಈ ಸಂಧರ್ಭದಲ್ಲಿ SDPI ಕ್ಷೇತ್ರ ಜೊತೆ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ಪಣಂಬೂರು ಮುಸ್ಲಿಂ ಜಮಾತ್ ಅಧ್ಯಕ್ಷರಾದ ರಹ್ಮತುಲ್ಲ, SDPI ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ನೌಶಾದ್ ಚೊಕ್ಕಬೆಟ್ಟು, ಕಾರ್ಯದರ್ಶಿ ಶಬೀರ್ ಕೃಷ್ಣಾಪುರ, ಕಾರ್ಪೋರೇಟರ್ ಶಂಷಾದ್ ಅಬೂಬಕ್ಕರ್, ಊರಿನ ಹಿರಿಯರಾದ ಇಬ್ರಾಹಿಂ, ಕೆ ಹಸನಬ್ಬ, ಎ.ಕೆ ಪ್ಲಾಝಾ ಮಾಲಕರಾದ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು. ತೌಕೀರ್ ಕಾಟಿಪಳ್ಳ ರವರು ಸ್ವಾಗತಸಿ ನಿಶಾದ್ ಕೈಕಂಬ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.