ಡೈಲಿ ವಾರ್ತೆ:19/DEC/2024
ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
ಸಕಲೇಶಪುರ: ತಾಲೂಕಿನ ಹಾದಿಗೆ ಗ್ರಾಮದಲ್ಲಿ 12 ಕೋಳಿಗಳು ಡಿ.18ರ ಬುಧವಾರ ದಿಢೀರ್ ಸಾವಿಗೀಡಾಗಿದ್ದು, ಕೋಳಿಯ ಬಾಯಲ್ಲಿ ಬೆಂಕಿ ಕಾಣಿಸಿದ್ದು, ಸ್ಥಳಿಯರಲ್ಲಿ ಆಶ್ಚರ್ಯ ಹುಟ್ಟಿಸಿದೆ.
ಗ್ರಾಮದ ರವಿ ಎಂಬವರಿಗೆ ಸೇರಿದ ಕೋಳಿಗಳು ಸಾವನ್ನಪ್ಪಿವೆ. ಸ್ಥಳೀಯರು ಹೊಟ್ಟೆಯ ಮೇಲೆ ಭಾರವಾಗಿ ಅದುಮಿದಾಗ ಜೋರು ಬೆಂಕಿ ಕಾಣಿಸಿಕೊಡಿದೆ. ಹೀಗೆ 5-6 ಬಾರಿ ಬೆಂಕಿ ಕಂಡಿದ್ದು, ಆಶ್ಚರ್ಯ ಮೂಡಿಸಿದೆ. ಈ ವಿಡಿಯೋ ವೈರಲ್ ಆಗಿದೆ.
ಕೋಳಿಗಳನ್ನು ಕೊಲ್ಲುವ ಉದ್ದೇಶದಿಂದ ಯಾರಾದರೂ ಮದ್ದು ಹಾಕಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.
ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದ್ದು, ಪೊಲೀಸರು ತನಿಖೆ ನಡೆಸಬೇಕು. ಕೋಳಿಗಳ ಸಾವಿಗೆ ಕಾರಣ ತಿಳಿಸಬೇಕೆಂದು ರವಿ ಒತ್ತಾಯಿಸಿದ್ದಾರೆ.