ಡೈಲಿ ವಾರ್ತೆ:19/DEC/2024
ಸಾಮಾನ್ಯರಿಗೆ, ವಿಶೇಷ ಚೇತನರೇ ಪ್ರೇರಣೆಯಾಗಬೇಕು : ಪಿ.ಡಿ.ಒ ಶ್ರೀನಿವಾಸ್
ಹರಪನಹಳ್ಳಿ :- ನೀಲಗುಂದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಟಿ ರಾಜಪ್ಪ ಇವರ ಅಧ್ಯಕ್ಷತೆಯಲ್ಲಿ ಹಾಗೂ ವಿ.ಆರ್.ಡಬ್ಲ್ಯೂ ಜಿ.ಪ್ರಕಾಶ್ ನೇತೃತ್ವದಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಹಾಗೂ ವಿಶ್ವ ವಿಕಲಚೇನರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ನೀಲಗುಂದ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಹಾಗೂ ವಿಶ್ವ ವಿಕಲಚೇನರ ದಿನಾಚರಣೆ ಕಾರ್ಯಕ್ರಮವನ್ನು ನೀಲಗುಂದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀನಿವಾಸ ಅವರು ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ ಅಂಗವಿಕಲರಲ್ಲಿ ಸಾಕಷ್ಟು ಪ್ರತಿಭೆ ಇದೆ. ಎಲ್ಲ ಇದ್ದವರಲ್ಲಿ ಇರಲಾರದ ಕಲೆ, ಪ್ರತಿಭೆ ವಿಶೇಷ ಚೇತನರಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಚೇತನರು ಇಂದು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯರಿಗಿಂತ ಹೆಚ್ಚು ಮನಸ್ಸಿನಿಂದ ಕೆಲಸ ಮಾಡುತ್ತಾರೆ. ಸಹಜವಾಗಿ ಇರುವವರಿಗೆ ವಿಶೇಷ ಚೇತನರೇ ಪ್ರೇರಣೆ ಎಂದು ಹೇಳಿದರು.
ಎಂ.ಆರ್.ಡಬ್ಲ್ಯೂ ಧನರಾಜ್ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ಅಂಗವಿಕಲರಿಗೆ ಸಮನ್ವಯ ಗ್ರಾಮಸಭೆ ನಡೆಸಬೇಕು. ಗ್ರಾಮ ಪಂಚಾಯಿತಿಗಳ ಅನುದಾನದಲ್ಲಿ ಶೇ 5ರಷ್ಟು ಮೀಸಲಿಟ್ಟು, ಮಾರ್ಗಸೂಚಿಗಳಂತೆ ಖರ್ಚು ಮಾಡಬೇಕು ಎಂದುಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ–2016 ಹೇಳುತ್ತದೆ.
ಪಂಚಾಯಿತಿ ಹಂತದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ವಿಕಲಚೇತನರ ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಆಹ್ವಾನಿಸಬೇಕು. ಸ್ಥಳೀಯ ಅಂಗವಿಕಲರ ಸಮಸ್ಯೆ ಆಲಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ವಕೀಲ ವಾಗೀಶ್ ಮಾತನಾಡಿ ಅಂಗವಿಕಲರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ಅಂಗವಿಕಲರ ಬಗೆಗಿನ ತಾತ್ಸಾರ ಮನೋಭಾವವನ್ನು ತೊಡೆದು ಹಾಕಲು ಮತ್ತು ಅವರಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಸ್ವಾಭಿಮಾನದಿಂದ ಬಾಳಲು ಉತ್ತೇಜನ ನೀಡಲೆಂದೇ ಈ ದಿನಾಚರಣೆ ಹಾಗಾಗಿ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕುರಿತು ಜಾಗೃತಿ. ಸಮಾನ ಅವಕಾಶ, ಸೌಲಭ್ಯ ಕಲ್ಪಿಸುವುದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ , ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣ ಟ. ರಾಜಪ್ಪ ಮತ್ತು ಉಪಾಧ್ಯಕ್ಷರಾದ ಹನುಮಂತ, ಸದಸ್ಯರಾದ ಬಿ.ಸಿದ್ದೇಶ್, ಸಂತೋಷ್, ವಿ.ಮಹಾಂತೇಶ್, ಹಾಗೂ ವಿ.ಆರ್. ಡಬ್ಲ್ಯೂ ಜಿ.ಪ್ರಕಾಶ್, ಎಸ್.ಡಿ.ಎ ಲಿಂಗರಾಜ್, ಅಂಗನವಾಡಿ ಟೀಚರ್ ಸುಮ, ಪಾಲಾಕ್ಷಪ್ಪ, ಶಿವಮೂರ್ತೆಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ, ಹಾಗೂ ಊರಿನ ಮುಖಂಡರು ಭಾಗವಿಸಿದ್ದರು.