ಡೈಲಿ ವಾರ್ತೆ:25/DEC/2024
ಶಂಕರನಾರಾಯಣ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತ್ಯು
ಕುಂದಾಪುರ: ಅಡಿಕೆ ಕೊಯ್ಯುತ್ತಿದ್ದ ವೇಳೆ ಕೊಕ್ಕೆ ವಿದ್ಯುತ್ ತಂತಿಗೆ ತಗಲಿದ ಪರಿಣಾಮ ಜಾರ್ಖಂಡ್ ರಾಜ್ಯದ ಕಾರ್ಮಿಕ ಮೃತಪಟ್ಟಘ ಘಟನೆ ಉಳ್ಳೂರು ಗ್ರಾಮದ ಅಬ್ಬಿಬೇರು ಎಂಬಲ್ಲಿ ನಡೆದಿದೆ.
ಮೃತರನ್ನು ಜಾರ್ಖಂಡ್ ರಾಜ್ಯದ ರಾಂಜಿ ಜಿಲ್ಲೆಯ ರಾಮ್ ಕಿಶುನ್ ಓರಾನ್(34) ಎಂದು ಗುರುತಿಸಲಾಗಿದೆ.
ರಾಮ್ ಕಿಶುನ್ ಅಡಿಕೆ ಕೊಯ್ಯುವ ಕೊಕ್ಕೆಯನ್ನು ಮರಕ್ಕೆ ಹತ್ತಿ ಅಡಿಕೆ ಕೊಯ್ಯುತ್ತಿದ್ದ ದೇವಾ ಎಂಬವರಿಗೆ ನೀಡುವಾಗ ಅಲ್ಲೇ ಹಾದು ಹೋಗಿರುವ ವಿದ್ಯತ್ ತಂತಿಗೆ ತಗಲಿತ್ತೆನ್ನಲಾಗಿದೆ.
ಇದರಿಂದ ವಿದ್ಯುತ್ ಹರಿದು ರಾಮ್ ಕಿಶುನ್ ಓರಾನ್ ನೆಲಕ್ಕೆ ಬಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಅವರು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.