ರಾಜ್ಯ ಸರ್ಕಾರದ ವಕ್ಫ್ ಮಂಡಳಿ ಯಿಂದ ಉಡುಪಿ ಜಿಲ್ಲೆಯ 8 ವಕ್ಫ್ ಸಂಸ್ಥೆಗಳಿಗೆ ಮೃತದೇಹಗಳನ್ನಿಡುವ ಪ್ರೀಜರ್ ಬಾಕ್ಸ್ ನ್ನು ಸಿ.ಎಚ್. ಅಬ್ದುಲ್ ಮುತಾಲಿ ಅವರಿಂದ ಹಸ್ತಾಂತರ

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬೆಂಗಳೂರು ರವರ ಮುಖಾಂತ್ರ ಉಡುಪಿ ಜಿಲ್ಲೆಯ 8 ವಕ್ಫ್ ಸಂಸ್ಥೆಗಳಿಗೆ ಮೃತ ದೇಹಗಳ ಇಡುವ ಫ್ರೀಜರ್ ಬಾಕ್ಸ್ ಗಳನ್ನು ನೀಡಲಾಗಿರುತ್ತದೆ.

ದಿನಾಂಕ 25.12.2024ರಂದು ಉಡುಪಿ ಜಿಲ್ಲಾ ವಕ್ಫ್ ಕಛೇರಿ ಮಣಿಪಾಲದಲ್ಲಿ ಉಡುಪಿ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರಾದ ಜನಾಬ್ ಸಿ ಎಚ್ ಅಬ್ದುಲ್ ಮುತಾಲಿ ವಂಡ್ಸೆ ಅವರು 8 ವಕ್ಫ್ ಸಂಸ್ಥೆಗಳಿಗೆ ಹಸ್ತಾಂತರಿಸಿದರು.

  1. ಜಾಮಿಯಾ ಮಸೀದಿ ಉಡುಪಿ
  2. ಜಾಮಿಯಾ ಮಸೀದಿ ಕುಂದಾಪುರ
  3. ಮುಸ್ಲಿಂ ಜಮಾತ್ ಜುಮಾ ಮಸೀದಿ ಸಾಲ್ಮರ್ ಕಾರ್ಕಳ
  4. ಜಾಮಿಯಾ ಮಸೀದಿ , ಕೋಟ
  5. ಜಾಮಿಯಾ ಮಸೀದಿ ಕೋಟೆ ಕಟಪಾಡಿ
  6. ಸೈಯದಿನ ಅಬೂಬಕ್ಕರ್ ಸಿದ್ದಿಕ್ ಮಸೀದಿ ಮಲ್ಪೆ
  7. ಮುಹಿಯದ್ದೀನ್ ಜುಮ್ಮಾ ಮಸೀದಿ ಮರವಂತೆ ನಾವುಂದ
  8. ಜಾಮಿಯಾ ಮಸೀದಿ ಬೈಂದೂರು

ಈ ಸಂಸ್ಥೆಗಳಿಗೆ ಫ್ರೀಜರ್ ಬಾಕ್ಸ್ ಗಳನ್ನು ವಿತರಿಸಿದರು ಹಾಗೂ ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಿ.ಎಚ್.ಅಬ್ದುಲ್ ಮುತಾಲಿ ಅವರು ಮಾತನಾಡಿ ಫ್ರೀಜರ್ ಬಾಕ್ಸ್ ಗಳಿಗೆ ಯಾವುದೇ ಬಾಡಿಗೆ ಇರುವುದಿಲ್ಲ ಈ ಸಂಸ್ಥೆಗಳ ಆಸುಪಾಸಿನ ಜಮಾತಿನ ಬಾಂಧವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಹಾಗೂ ಫ್ರೀಜರ್ ಒದಗಿಸಿಕೊಟ್ಟ ಕರ್ನಾಟಕ ರಾಜ್ಯ ವಕ್ಫ್ ಸಚಿವರಾದ ಜನಾಬ್ ಬಿ.ಝೆಡ್ ಜಮೀರ್ ಅಹಮದ್ ರವರಿಗೂ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಅನ್ವರ್ ಪಾಷ ರವರಿಗೆ ಹಾಗೂ ವಕ್ಫ್ ಬೋರ್ಡ್ ನಿಕಟಪೂರ್ವ ಅಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಹಾಗೂ ರಾಜ್ಯ ವಕ್ಫ್ ಬೋರ್ಡ್ ನ ಸದಸ್ಯ ಯಾಕೂಬ್ ಗುಲ್ವಾಡಿ ರವರಿಗೂ ಉಡುಪಿ ಜಿಲ್ಲಾ ವಕ್ಫ್ ಸಲಹ ಸಮಿತಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ನಾಜಿಯ ಹಾಗೂ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ ರಹಮಾನ್ ರಝ್ವಿ ಕಲ್ಕಟ್ಟ ಹಾಗೂ ಸದಸ್ಯರುಗಳಾದ ಆಸಿಫ್ ಕಟಪಾಡಿ ,ಮನ್ಸೂರ್ ನಾವುಂದ , ಸುಬ್ಹಾನ್ ಹೊನ್ನಾಳ , ಹಮೀದ್ ಯುಸುಫ್ ಮೂಳುರ್, ಅಬ್ದುಲ್ ಖಾಲಿಕ್ ಕಾರ್ಕಳ, ಇಜಾಜ್ ಕಾರ್ಕಳ ಹಾಗು ವಕ್ಫ್ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.