ಡೈಲಿ ವಾರ್ತೆ: 04/JAN/2025
ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀನಿಯಾತ್ ದಿನಾಚರಣೆ
ಗಂಗೊಳ್ಳಿ| ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯಲ್ಲಿ ಜ. 01 ರಂದು ಶಾಲೆಯ ಮೌಲಾನಾ ಅಬುಲ್ ಕಲಾಂ ಆಜಾದ್ ಸಭಾಂಗಣದಲ್ಲಿ ದೀನಿಯಾತ್
ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಹಿರಾ ಶಿಕ್ಷಣ ಸಂಸ್ಥೆಯ ಇಸ್ಲಾಮಿಕ್ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಮೌಲಾನಾ ಸೈಯದ್ ಶುಯೈಬ್ ಹುಸೈನ್ ನದ್ವಿ, ಮಂಗಳೂರಿನ ಪ್ರೈಮ್ ಕನ್ಸ್ಟ್ರಕ್ಷನ್ಸ್ ಇದರ ಮಾಲಕರಾದ ಜನಾಬ್ ಎಸ್. ಏ. ಖಲೀಲ್, ತೌಹೀದ್ ವಿಶ್ವಸ್ಥ ಮಂಡಳಿಯ ಖಜಾಂಜಿ ಜನಾಬ್ ಶೇಖ್ಜಿ ಅಬ್ದುಲ್ ಹಮೀದ್, ಉಪಾಧ್ಯಕ್ಷರಾದ ಜನಾಬ್ ಅಖ್ತರ್ ಅಹ್ಮದ್ ಖಾನ್, ಕಾರ್ಯದರ್ಶಿ ಜನಾಬ್ ಇಬ್ರಾಹಿಂ ಚೌಗಲೆ, ಅನಿವಾಸಿ ಗಣ್ಯರಾದ ಜನಾಬ್ ಶಾಹ್ನವಾಜ್ ಖಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮೌಲಾನಾ ಶುಯೈಬ್ ಹುಸೈನ್ ನದ್ವಿಯವರು “ಜ್ಞಾನವೇ ಸಂಪತ್ತು ”ಎನ್ನುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜನಾಬ್ ಶೇಖ್ಜಿ ಅಬ್ದುಲ್ ಹಮೀದ್ ಅವರು ತೌಹೀದ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಾಮಿಯಾ ಇಸ್ಲಾಮಿಯಾ ಭಟ್ಕಳದಲ್ಲಿ ಇತ್ತೀಚಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು.
ಮೌಲಾನ ಸಿಬ್ಗತುಲ್ಲಾ ಅತಿಥಿಗಳನ್ನು ಸ್ವಾಗತಿಸಿದರು, ಮೌಲಾನ ಅಬ್ದುಲ್ ಸುಭಾನ್ ನದ್ವಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.