ಡೈಲಿ ವಾರ್ತೆ: 06/JAN/2025
ಕೋಟ ಸಿಎ ಬ್ಯಾಂಕ್ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕೋಟ| ಕೋಟ ಸಹಕಾರಿ ವ್ಯವಸಾಯಕ ಸಂಘ(ನಿ) ಆಡಳಿತ ಮಂಡಳಿ ಚುನಾವಣೆ ಇದೆ ಜನವರಿ 19ರಂದು ನಡೆಯಲಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 13 ಅಭ್ಯರ್ಥಿಗಳು ಜ. 6 ರಂದು ಸೋಮವಾರ ನಾಮಪತ್ರ ಸಲ್ಲಿಸಿದರು.
ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ರಾಜು ಪೂಜಾರಿ ಕಾರ್ಕಡ, ಸಾಮಾನ್ಯ ವರ್ಗದಡಿಯಲ್ಲಿ ರವೀಂದ್ರ ಐತಾಳ್ ಪರಂಪಳ್ಳಿ, ರವೀಂದ್ರ ತಿಂಗಳಾಯ ಕೋಟತಟ್ಟು, ಮನೋಜ್ ಗುಂಡ್ಮಿ, ಅಣ್ಣಪ್ಪ ಕುಂದರ್ ಕೋಡಿ, ದಿನೇಶ್ ಶೆಟ್ಟಿ ಬೇಳೂರು, ಅಜಿತ್ ದೇವಾಡಿಗ ಕೋಟ, ರಂಜಿತ್ ಕೋಟ ಬಾರಿಕೆರೆ, ಅಜಿತ್ ಶೆಟ್ಟಿ ವಡ್ಡರ್ಸೆ, ST ಸತೀಶ್ ನಾಯ್ಕ್ ಗುಂಡ್ಮಿ, SC ಶೇಖರ್ G. ಗಿಳಿಯಾರ್, ಮಹಿಳಾ ಉಮಾ ಗಾಣಿಗ ಚಿತ್ರಪಾಡಿ, ಶಾರದಾ ಕಾಂಚನ್ ಮಣೂರು ಪಡುಕೆರೆ ಇವರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಕುಂದರ್ ಮತ್ತು CA ಬ್ಯಾಂಕ್ ಮಾಜಿ ನಿರ್ದೇಶಕರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಶ್ಯಾಮ್ ಸುಂದರ್ ನಾಯಿರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ನಾಮ ಪತ್ರ ಸ್ವೀಕರಿಸಿದರು.