ಡೈಲಿ ವಾರ್ತೆ: 06/JAN/2025

ಕೋಟ ಸಹಕಾರಿ ವ್ಯವಸಾಯಕ ಸಂಘದ ಆಡಳಿತ ಮಂಡಳಿ ಚುನಾವಣೆ – ಸಂಘದ ಹಾಲಿ ಅಧ್ಯಕ್ಷ ಕೃಷ್ಣ ಕಾಂಚನ್ ಹಾಗೂ ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘದ ಆಡಳಿತ ಮಂಡಳಿ ಚುನಾವಣೆ ಜನವರಿ 19 ರಂದು ನಡೆಯಲಿದೆ.

ಈ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿ ಅನ್ವಯ ಕಳೆದ ಬಾರಿ ಯಶಸ್ವಿ ಆಡಳಿತ ನಡೆಸಿದ ಹಾಲಿ ಅಧ್ಯಕ್ಷರಾದ ಕೃಷ್ಣ ಕಾಂಚನ್ ಕೋಡಿ, ಹಿಂದುಳಿದ ವರ್ಗ 2 ಎ ಅನ್ವಯ ಮಾಜಿ ಅಧ್ಯಕ್ಷರಾದ ತಿಮ್ಮ ಪೂಜಾರಿ ಗಿಳಿಯಾರು,. ಸಾಮಾನ್ಯ ಮೀಸಲಾತಿ ಅನ್ವಯ ನಾಗರಾಜ್ ಹಂದೆ ಕೋಟ, ರಾಘವೇಂದ್ರ ಮಧ್ಯಸ್ಥ, ಚಂದ್ರಪೂಜಾರಿ ಸಾಲಿಗ್ರಾಮ, ಉದಯ ಕುಮಾರ್ ಶೆಟ್ಟಿ ಕೊತ್ತಾಡಿ, ರವೀಂದ್ರ ಕಾಮತ್, ದಿನಕರ್ ಶೆಟ್ಟಿ ಬೇಳೂರು, ಮಹೇಶ್ ಶೆಟ್ಟಿ ಕೋಟ ಮಹಿಳಾ ಮೀಸಲಾತಿ ಅನ್ವಯ ಶ್ರೀಮತಿ ವಸಂತಿ ಅಚ್ಚುತ್ ಪೂಜಾರಿ, ಶ್ರೀಮತಿ ಪ್ರೇಮಗಣೇಶ್, SC ಮೀಸಲಾತಿ ಅನ್ವಯ ಮಂಜುನಾಥ್ ಗಿಳಿಯಾರು ST ಮೀಸಲಾತಿ ಅನ್ವಯ ಶ್ರೀಮತಿ ರಶ್ಮಿತಾ, ಇವರು ನಾಮ ಪತ್ರ ಸಲ್ಲಿಸಿದರು.

ಚುನಾವಣಾ ಅಧಿಕಾರಿಯಾಗಿ ಕೋಟ ಸಿಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ನಾಮಪತ್ರ ಸ್ವೀಕರಿಸಿದರು.