ಡೈಲಿ ವಾರ್ತೆ: 06/JAN/2025

ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು

ಚಾಮರಾಜನಗರ: ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಈ ಘಟನೆ ನಡೆದಿದೆ. 8 ವರ್ಷದ ತೇಜಸ್ವಿನಿ ಮೃತ ವಿದ್ಯಾರ್ಥಿನಿ. ಚಾಮರಾಜನಗರದ ಬದನಕುಪ್ಪೆ ನಿವಾಸಿ ಲಿಂಗರಾಜು ಮತ್ತು ಶೃತಿ ದಂಪತಿಯ ಪುತ್ರಿ ತೇಜಸ್ವಿನಿ ಇಂದು ಶಿಕ್ಷಕಿಗೆ ನೋಟ್ಸ್ ತೋರಿಸುವ ವೇಳೆ ಕುಸಿದು ಬಿದ್ದಿದ್ದಾಳೆ.

ತಕ್ಷಣವೇ ಆಕೆಯನ್ನ ಜೆಎಸ್ ಎಸ್ ಆಸ್ಪತ್ರೆಗೆ ಕರೆತರಲಾಗಿದ್ದು ಆದರೆ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ತೇಜಸ್ವಿನಿ ಮೃತಪಟ್ಟಿದ್ದಾಳೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪೋಷಕರು ಶವವನ್ನ ಆಸ್ಪತ್ರೆಯಿಂದ ಕೊಂಡೊಯ್ದಿದ್ದಾರೆ.