ಡೈಲಿ ವಾರ್ತೆ: 07/JAN/2025

ಕೋಟ| ಶ್ರೀ ಶನೀಶ್ವರ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ದಾನ ಶ್ರೀ ಕ್ಷೇತ್ರ ಹಾಡಿಕೆರೆ ಬೆಟ್ಟು ಇದರ ವಾರ್ಷಿಕವರ್ಧಂತಿ ಹಾಗೂ ನೂತನ ಸಭಾಭವನದ ಲೋಕಾರ್ಪಣೆಯ ಅಮಂತ್ರಣ ಪತ್ರಿಕೆ ಬಿಡುಗಡೆ

ಕೋಟ: ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ದಾನ ಶ್ರೀ ಕ್ಷೇತ್ರ ಹಾಡಿಕೆರೆ ಬೆಟ್ಟು ಈ ಶ್ರೀ ಕ್ಷೇತ್ರದಲ್ಲಿ ನೆಡೆಯುವ ಪೆಬ್ರವರಿ 12 ರಿಂದ 15 ರತನಕ ವಾರ್ಷಿಕವರ್ಧಂತಿ ಹಾಗೂ ಸುಮಾರು ಒಂದು ವರೆ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ನೂತನ ಸಭಾಭವನದ ಲೋಕಾರ್ಪಣೆಯ ಅಮಂತ್ರಣ ಪತ್ರಿಕೆಯು ನಮ್ಮೂರಿನ ಕೀರ್ತಿಕಳಶ ಗೀತಾನಂದ ಫೌಂಡೇಶ್ ನಾ ಪ್ರವರ್ತಕರು ಶ್ರೀಯುತ ಆನಂದ್ ಸಿ. ಕುಂದರ್ ಅವರ ಅಮೃತ ಹಸ್ತದಲ್ಲಿ ಬಿಡುಗಡೆ ಮಾಡಲಾಯಿತು.

ಈ ಹಿಂದೆಯು ಸಹಾ ಅವರ ಅಮೃತ ಹಸ್ತದಲ್ಲಿ ಕಟ್ಟಡದ ನಿಧಿಕುಂಭ ಸ್ದಾಪನೆ ಮಾಡಿದವರಾಗಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪಾತ್ರಿಯವರಾದ ಕೆ.ಭಾಸ್ಕರ್ ಸ್ವಾಮಿ, ಪಂಚವರ್ಣದ ಸ್ದಾಪನಾಧ್ಯಕ್ಷರು ಶೇವಧಿ ಸುರೇಶ್ ಗಾಣಿಗ, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ, ಉದ್ಯಮಿ ಸಿದ್ದಿ ಶ್ರೀನಿವಾಸ, ತಿಮ್ಮಣ್ಣ, ಅರ್ಚಕರಾದ ಜಯರಾಜ್ ಪಡುಕರೆ, ಸಂತೋಷ್ ಸಾಲಿಯಾನ್, ರವಿ ಕೋಟ ಪ್ರವೀಣ್, ಶ್ರೀಕಾಂತ್ ಉಪಸ್ದಿತರಿದ್ದರು.