ಡೈಲಿ ವಾರ್ತೆ: 08/JAN/2025

540 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 19 ವರ್ಷದ ಯುವತಿ ಮೃತ್ಯು

ಗುಜರಾತ್: ಗುಜರಾತ್ ನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 19 ವರ್ಷದ ಯುವತಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ.

ಗುಜರಾತ್ ನ ಕಚ್ ಜಿಲ್ಲೆಯಲ್ಲಿ 540 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 19 ವರ್ಷದ ಬಾಲಕಿಯನ್ನು 33 ಗಂಟೆಗಳ ನಂತರ ರಕ್ಷಿಸಲಾಗಿದ್ದು, ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕೊಳವೆಬಾವಿಯು ಒಂದು ಅಡಿ ವ್ಯಾಸವನ್ನು ಹೊಂದಿತ್ತು, ಮತ್ತು ಅವಳು ಅದರಲ್ಲಿ ಆಳವಾಗಿ ಸಿಲುಕಿಕೊಂಡಿದ್ದರಿಂದ ರಕ್ಷಣಾ ಪ್ರಯತ್ನಗಳು ಕಷ್ಟಕರವಾದವು. ದುರದೃಷ್ಟವಶಾತ್ ಬಾಲಕಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಭುಜ್ ತಾಲ್ಲೂಕಿನ ಕಂದೇರೈ ಗ್ರಾಮದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಾಲಕಿ ಕೊಳವೆಬಾವಿಗೆ ಬಿದ್ದಿದ್ದಳು.

ಕಚ್ ನ ಭುಜ್ನ ಕಾಂಧ್ರೈ ಗ್ರಾಮದ ಕೃಷಿ ಜಮೀನಿನಲ್ಲಿ 19 ವರ್ಷದ ಯುವತಿಯೊಬ್ಬಳು ಬೆಳಿಗ್ಗೆ 5 ರಿಂದ 5.30 ರ ನಡುವೆ 540 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಳು. ಈ ಹುಡುಗಿ ಹೇಗೆ ಕೊಳವೆಬಾವಿಗೆ ಬಿದ್ದಳು ಎಂಬುದು ದೊಡ್ಡ ಪ್ರಶ್ನೆಯಾಗಿದೆ, ಅದನ್ನು ತನಿಖೆ ಮಾಡಲಾಗುತ್ತಿದೆ. ಬೋರ್ ವೆಲ್ ಮೇಲೆ ದೊಡ್ಡ ಕಲ್ಲುಗಳಿಂದ ಮುಚ್ಚಿರುವುದು ಗಮನಕ್ಕೆ ಬಂದಿದೆ. ಹಾಗಾದರೆ ಈ ಹುಡುಗಿ ಹೇಗೆ ಕೊಳವೆಬಾವಿಗೆ ಬಿದ್ದಳು ಎಂಬುದು ತನಿಖೆ ನಡೆಯುತ್ತಿದೆ.