ಡೈಲಿ ವಾರ್ತೆ: 18/JAN/2025
ಪಬ್ಲಿಕ್ ಫೈಲ್ ಪತ್ರಿಕೆಯ ಅಕ್ಷರ ಲೋಕದ ಸಂಭ್ರಮಕ್ಕೆ ಎರಡರ ಹೆಜ್ಜೆ…..!”ಕೃಷ್ಣ ನಗರಿಯಲ್ಲಿ ಕಳೆ ಕಟ್ಟುತಿದೆ ಸಾಹಿತ್ಯ ಸಮಾಗಮ….!”ರಾಜ್ಯದ ವಿವಿಧ ಕ್ಷೇತ್ರದ 65 ಸಾಧಕರಿಗೆ ಗೌರವದ ಅಭಿನಂದನೆ….!”ಇದು ಕನ್ನಡ ಪತ್ರಿಕೋದ್ಯಮ ದಿಟ್ಟ ಸಾಧನೆ…..!”
- ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ. ರಾಜ್ಯ ವಿಶೇಷ ವರದಿಗಾರರು ಬೆಂಗಳೂರು. Email:[email protected]
ಕರಾವಳಿ ಪತ್ರಿಕೋದ್ಯಮದಲ್ಲಿ ಪಬ್ಲಿಕ್ ಫೈಲ್ ಫೈಲ್ ಪತ್ರಿಕೆ ಮಹತ್ವದ ವರದಿಯ ಮೂಲಕ ಹೆಚ್ಚು ಪ್ರಸಿದ್ದಿ ಪಡೆದಿದೆ. ಎರೆಡು ವರ್ಷವನ್ನು ಪೂರೈಸಿ, ಮೂರನೇ ವರ್ಷದ ದಾಪುಗಲು ಇಟ್ಟಿದೆ.ಇದೀಗ ಸಾಹಿತ್ಯ ಸಮಾಗಮಕ್ಕೆ ಕಳೆ ಕಟ್ಟಿದೆ.
ಪಡುಗಡಲ ತಡಿಯಲ್ಲಿ ಪುಟ್ಟ ಮಗುವಾಗಿ ಹುಟ್ಟಿ, ಸಾರ್ಥಕತೆಯ ಎರಡು ವರ್ಷದ ಪಯಣವನ್ನ ಬೆಳೆಸಿ, ನಿಮ್ಮ ಮಡಿಲಿಗೆ ಪ್ರೀತಿಯಿಂದ ನೀಡುತ್ತಿದ್ದೇವೆ. ಕನ್ನಡ ಪತ್ರಿಕೋದ್ಯಮವನ್ನು ಉಸಿರಾಗಿಸಿಕೊಂಡು, ನೈಜ್ಯ ಪತ್ರಿಕೋದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಳೆದ 25 ವರುಷಗಳಿಂದ ಕನ್ನಡ ಪತ್ರಿಕೋದ್ಯಮದವನ್ನ ಆಳಿದ ಸಂಪಾದಕರಾದ ಎಂ.ಎನ್. ಕೊಟ್ಟಾರಿ ಅವರ ನೇತೃತ್ವ ಸದೃಢ ಬಳಗವನ್ನ ಕಟ್ಟುವಲ್ಲಿ ಸಾಧ್ಯವಾಯಿತು. ಕನ್ನಡ ಪತ್ರಿಕೆಯಲ್ಲಿ ವರದಿಗಳನ್ನು ಇಂಚಿಂಚಾಗಿ ಪರಿಶೀಲಿಸುವ ವರದಿಗಾರರ ತಂಡ ನಮ್ಮ ಪತ್ರಿಕೆಗೆ ಬೆನ್ನೆಲುಬಾಗಿ ನಿಂತಿದೆ. ಕನ್ನಡ ಪತ್ರಿಕೋದ್ಯಮದ ನೆಲದ ಮೇಲೆ ಹಾಗೂ ಸ್ವಂತ ಭೂಮಿಕೆಯಲ್ಲಿ ಹೊರತರಲು ಪಟ್ಟ ಶ್ರಮ ಬೆಟ್ಟದಷ್ಟಿದೆ. ಕಂಡು ಕಾಣರಿಯದಂತಹ ಸಮಸ್ಯೆಗಳನ್ನು ಬದಿಗೊತ್ತಿ, ಪಬ್ಲಿಕ್ ಫೈಲ್ ಎನ್ನುವ ಪತ್ರಿಕೆ ಇರೋನಾಮೆಯನ್ನ ತರುವಲ್ಲಿ ಬಹಳ ಶ್ರಮ ಪಟ್ಟಿದ್ದಾರೆ ಸಂಪಾದಕರು. ಕಳೆದ 25 ವರ್ಷಗಳಲ್ಲಿ ಬೇರೆ, ಬೇರೆ ಪತ್ರಿಕೆಗಳಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ ತನ್ನ ಕೆಲಸವನ್ನು ಕಟ್ಟುನಿಟ್ಟಾಗಿ ನಿಭಾಯಿಸಿ, ಎರಡು ವರ್ಷದ ಪಯಣದಲ್ಲಿ ಎಂದು ಎಡವಿಲ್ಲ, ರಾತ್ರಿ ಹಗಲೆನ್ನದೇ ಪತ್ರಿಕೆಯ ಕೆಲಸ ಕಾರ್ಯಗಳು ನಿರಂತರವಾಗಿ ಸಾಗಲು ಪ್ರೇರೇಪಿಸಿದವು, ವಿವಿಧ ಬರಹಗಾರ ವೈಶಿಷ್ಟ್ಯತೆಯನ್ನು ಪತ್ರಿಕೆ ಎತ್ತಿಹಿಡಿದಿದೆ. ಯಕ್ಷಗಾನ,ಭರತನಾಟ್ಯ, ಕೃಷಿ,ಹೈನುಗಾರಿಕೆ, ಆಚಾರ ವಿಚಾರ, ಹಬ್ಬ ಹರಿದಿನ , ಜಗತ್ತಿನ ಆಚಾರ ವಿಚಾರಗಳನ್ನು ಪ್ರೇರೇಪಿಸುವ ಸುದ್ದಿ ನಿರಂತರವಾಗಿ ನೀಡಿದ ಹೆಗ್ಗಳಿಕೆ ನಮಗಿದೆ. ಪಬ್ಲಿಕ್ ಫೈಲ್ ಪತ್ರಿಕೆಯ 2ನೇ ಪುಟದಲ್ಲಿ ಪ್ರಕಟವಾಗುತ್ತಿರುವ “ಸಮುದಾಯದ ಪುಟ” ಸಾರ್ವಜನಿಕರ ಸಮಸ್ಯೆಗೆ ಮೀಸಲಿಟ್ಟಿತ್ತು. ನಿರಂತರವಾಗಿ ಎರಡು ವರ್ಷಗಳ ಕಾಲ ಅನಾರೋಗ್ಯ ಪೀಡಿತ ಸಮಸ್ಯೆಗಳನ್ನ ಬೆಳಕು ಚೆಲ್ಲುವಲ್ಲಿ, ಸಹೃದಯ ದಾನಿಗಳನ್ನು ಮನಮುಟ್ಟುವಲ್ಲಿ ಪ್ರೇರೇಪಿಸಿದವು, ಎರಡು ವರ್ಷಗಳಲ್ಲಿ ನಾವು ಸಾಗಿ ಬಂದಾಗ ಹಿಂತಿರುಗಿ ನೋಡಿದಾಗ ಬದುಕಿನ ಕೆಲವು ಮಜಲುಗಳು ಮತ್ತೆ ನೆನಪಾಗುತ್ತದೆ. ಪತ್ರಿಕೆಯು ಪ್ರತಿ ತಿಂಗಳಿಗೆ ಎರಡು ಬಾರಿ ಪ್ರಕಟವಾದಾಗ ಸುದ್ದಿಯ ಗುಚ್ಚವನ್ನೇ ಹೊತ್ತು ತರುತಿದೆ. ಪಬ್ಲಿಕ್ ಫೈಲ್ ಪತ್ರಿಕೆಯ ಸಾರ್ಥಕತೆ ಪತ್ರಿಕೋದ್ಯಮಕ್ಕೆ ಎರಡು ವರ್ಷದ ಸಂಭ್ರಮ. ಪತ್ರಿಕೆ ನಡೆಸುವ ಇಂತಹ ಕಾಲದಲ್ಲಿ ವಾರ್ಷಿಕ ವರಮಾನದ ಕೊರತೆ, ಜಾಹೀರಾತುದಾರರ ನಿಷ್ಕಲ್ಮಶ ಪ್ರೀತಿ, ಹಾಗೂ ಓದುಗರ ನಿರಂತರ ಪ್ರೋತ್ಸಾಹ ನಮ್ಮನ್ನ ಬೆಟ್ಟದಷ್ಟು ಬೆಳೆಯಲು ಸಾಧ್ಯವಾಯಿತು. ಕನ್ನಡ ಪತ್ರಿಕೋದ್ಯಮದ ಇತಿಹಾಸ ಮತ್ತೆ ತಿರುಗಿ ನೋಡಲು ಪಬ್ಲಿಕ್ ಫೈಲ್ ಪತ್ರಿಕೆಯ ಓದುಗರ ಸಮಾಗಮ 2025 ಸಮಸ್ತ ಓದುಗರಿಗೆ ಹೆಮ್ಮೆ ನೀಡಿತು. ಕಾರ್ಯಕ್ರಮವನ್ನು ಸಿದ್ಧಪಡಿಸುವಾಗ ಮತ್ತು ಕಾರ್ಯಕ್ರಮದ ರೂಪರೇಷೆಯನ್ನ ಸಿದ್ಧಪಡಿಸಲು ಮಾಧ್ಯಮ ವರದಿಗಾರರ ತಂಡ, ಆಡಳಿತ ಮಂಡಳಿಯ ಸರ್ವರೂ ಗಮನ ಹರಿಸಿ ನಾಜೂಕಾಗಿ ಸಿದ್ಧಪಡಿಸಿದ್ದೇವೆ. ಉಡುಪಿ ಜಿಲ್ಲೆಗೆ ಮಾತ್ರ ಪತ್ರಿಕೆ ಸೀಮಿತವಿಲ್ಲದೆ ಮಹಾನಗರಿ ಬೆಂಗಳೂರಿಗೂ ಕಾಲಿಟ್ಟು, ಜಲಂತ ಪತ್ರಿಕೆಗೆ ಸಾಕ್ಷಿಯಾಗಿ ನಿಂತಿತು. ಯಾವುದೇ ರಾಷ್ಟ್ರಮಟ್ಟದ ಪತ್ರಿಕೆಯು ಕೂಡ ಸರಿಸಾಟಿ ಇಲ್ಲದ ಪೈಪೋಟಿ ನಮ್ಮದಾಗಿತ್ತು. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಮುದ್ರಣಾ ಮಾಧ್ಯಮದಲ್ಲೂ ಕೂಡ ನಮ್ಮ ಸಾಧನೆ ಬೆಟ್ಟದಷ್ಟಿತ್ತು. ಸತ್ಯಂ ಶಿವಂ ಸುಂದರಂ ಎನ್ನುವ ನಾಣ್ನುಡಿ ಎಲ್ಲರಲ್ಲೂ ಸಾರ್ಥಕತೆಯ ಭಾವ ಮೂಡಿಸಿದೆ. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲೇ ಪಬ್ಲಿಕ್ ಫೈಲ್ ಪತ್ರಿಕೆ ಎರಡನೆಯ ವರ್ಷದ ಅದ್ದೂರಿ ಕಾರ್ಯಕ್ರಮ ಸಂಭ್ರಮದಿಂದ ಜರಗುತಿದೆ.
“ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಅರ್ಪಿಸುವ……!”ಸಾಧಕರ ಸಮಾಗಮ – 2025 ಕ್ಕೆ ಕ್ಷಣಗಣನೆ…!”
ಇಂದು ಕೃಷ್ಣ ನಗರಿ ಉಡುಪಿಯಲ್ಲಿ ಸಂಭ್ರಮದ ಕಾರ್ಯಕ್ರಮ….!” 65 ಸಾಧಕರಿಗೆ ಒಂದೇ ವೇದಿಕೆಯಲ್ಲಿ ಅಭೂತಪೂರ್ವ ಸನ್ಮಾನ, ಅಭಿನಂದನೆ…..!” ಬನ್ನಿ ಕೃಷ್ಣನಗರಿಗೆ….!”
ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ. ಪಬ್ಲಿಕ್ ಫೈಲ್ ಪತ್ರಿಕೆ ಕಳೆದ ಎರಡು ವರುಷಗಳಿಂದ ನಿರಂತರವಾಗಿ ಸುದ್ದಿಯ ಮೂಲ ಹಾಗೂ ಸುದ್ದಿಯ ಪ್ರಕಾರತೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಕಾರ್ಯಕ್ಷಮತವಾಗಿ ದುಡಿಯುತ್ತಿದೆ. ಪ್ರಕೃತಿಯ ಮಡಿಲಲ್ಲಿ ಕನ್ನಡ ಪತ್ರಿಕೋದ್ಯಮದಲ್ಲೇ ಇತಿಹಾಸದಲ್ಲೇ ಎರಡು ವರ್ಷವನ್ನು ಪೂರೈಸಿ 3ನೇ ವರ್ಷದತ್ತ ದಾಪುಗಲ್ಲಿಡಲು ಸಜ್ಜಾಗುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಸುದ್ದಿಯನ್ನು ಮಾತ್ರ ಗಮನದಲ್ಲಿಟ್ಟು ಕೊಳ್ಳದೆ, ವಸ್ತುನಿಷ್ಠ ವರದಿ ಮತ್ತು ಸಮಾಜದ ಬೆಳಕಿಗೆ ನೇರವಾದ ವರದಿಯನ್ನು ನೀಡುವುದರೊಂದಿಗೆ ಓದುಗರ ಬೆಂಬಲದೊಂದಿಗೆ ಪತ್ರಿಕೆ ಎರಡು ವರ್ಷವನ್ನು ಪೂರೈಸಿ ಮುನ್ನುಗ್ಗುತ್ತಿದೆ. ಪಬ್ಲಿಕ್ ಫೈಲ್ ಪತ್ರಿಕೆ ಹದಿನೈದು ದಿನಕ್ಕೊಮ್ಮೆ ಜನರ ಮುಂದಿಡುವ ಪ್ರಯತ್ನ ಮಾಡುತ್ತಿರುವುದು ಸಂಪಾದಕರಾದ ಎಂ.ಎನ್. ಕೊಟ್ಟಾರಿ ಅವರ ಮಾಲಕತ್ವ ಹಾಗೂ ಸುಭದ್ರ ಬಳಗದೊಂದಿಗೆ ಪತ್ರಿಕೆ ನಿರಂತರವಾಗಿ ಚಾಪು ಮಾಡಿಸುತ್ತಿದೆ. ಪ್ರಥಮ ವರ್ಷದಲ್ಲಿ ನಾವು 35 ಜನರ ಸಾಧಕರನ್ನ ಸಮಾಜದ ಮುಖ್ಯವಾಹಿನಿಗೆ ಗುರುತಿಸುವಲ್ಲಿ ಸಫಲರಾದವು. ವಿವಿಧ ಸಮಾಜದ ಗಣ್ಯರ ಸಮ್ಮುಖದಲ್ಲಿ ಅವರಿಗೆ ವಿಶಿಷ್ಟ ರೀತಿಯ ಪ್ರಶಸ್ತಿ ಪ್ರಧಾನವನ್ನು ಏರ್ಪಡಿಸುವುದರ ಮೂಲಕ ಜಿಲ್ಲೆಯಲ್ಲಿಯೇ ನಂಬರ್ ಒನ್ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಶೇಷ. ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧಕರನ್ನು ಗುರುತಿಸುವುದರ ಮೂಲಕ ಜಿಲ್ಲೆಯಲ್ಲಿಯೇ ವೈಶಿಷ್ಟ್ಯ ಪೂರ್ಣಾ ಕಾರ್ಯಕ್ರಮವನ್ನು ರೂಪಿಸಿದಂತಹ ಹೆಗ್ಗಳಿಕೆ ಪಬ್ಲಿಕ್ ಫೈಲ್ ಪತ್ರಿಕೆ ಗೆ ಸಲ್ಲುತ್ತದೆ. ಅದಾದ ಬಳಿಕ ಒಂದು ವರ್ಷ ಪೂರೈಸಿ ಎರಡನೇ ವರ್ಷದ ದಾಪುಗಾಲಿಟ್ಟು ಇದೀಗ ಎರಡು ವರ್ಷವನ್ನು ಪೂರೈಸಿ ಮೂರನೇ ವರ್ಷಕ್ಕೆ ಮಿಂಚಿನ ಸಂಚಲನವನ್ನು ಮೂಡಿಸುತ್ತಿದೆ. ಪತ್ರಿಕೋದ್ಯಮವನ್ನು ಸಮರ್ಥವಾಗಿ ಅರ್ಥಮಾಡಿಕೊಂಡು ಸುದ್ದಿಯ ಜೊತೆಗೆ ವಿಶಿಷ್ಟ ರೀತಿಯ ಪ್ರಕಾರತೆಯನ್ನ ಮೈಗೂಡಿಸಿಕೊಂಡು ಪತ್ರಿಕೋದ್ಯಮದ ವರದಿ ಹಾಗೂ ವಸ್ತುನಿಷ್ಠವಾದಂತಹ ಕಳಕಳಿ ಸಮಾಜದಲ್ಲಿ ಗುರುತಿಸುವಂತೆ ಮಾಡಿರುವುದು ಇನ್ನೊಂದು ಹೆಗ್ಗಳಿಕೆ. ಹತ್ತಾರು ವರದಿಗಳು ಸರ್ಕಾರವನ್ನ ಆಡಳಿತ ವರ್ಗವನ್ನು ಎಚ್ಚರಿಸುವಲ್ಲಿ ಸದಾ ಪ್ರಯತ್ನ ಮಾಡುತ್ತಿದೆ. ಪತ್ರಿಕೆ ಮತ್ತು ಪತ್ರಿಕೆ ಜೊತೆಗಿನ ಸಂಬಂಧವನ್ನು ವಸ್ತುನಿಷ್ಠವಾಗಿ ಕಂಡರಿಯದ ಲೋಕಕ್ಕೆ ಕೊಂಡುಯುವ ವಿಶಿಷ್ಟ ವಿಭಿನ್ನ ಪ್ರಕಾರತೆಯ ವರದಿಗಳು ಸಮಾಜದ ಮುಖ್ಯವಾಹಿನಿ ತರುವಲ್ಲಿ ಪ್ರಯತ್ನಿಸುತ್ತಿದೆ. ಅದೇ ರೀತಿ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟವಾದಂತಹ ವರದಿ ಮತ್ತು ತನಿಖಾ ವರದಿಗಳು ಸಮಾಜವನ್ನು ಮತ್ತೆ ಬಡಿದೆಬ್ಬಿಸಿತು. ಸಂಪಾದಕರು ಮತ್ತು ಮಾಲೀಕತ್ವದ ಜವಾಬ್ದಾರಿಗಳು ನಿರಂತರವಾಗಿ ಪ್ರೋತ್ಸಾಹಕ ರೀತಿಯಲ್ಲಿ ನಡೆದಾಗ ಸುದ್ದಿ ಮಾಧ್ಯಮಗಳು ಇನ್ನಷ್ಟು ಹೆಜ್ಜೆ ಹಾಕಲು ಸಾಧ್ಯ. ಅದೇ ರೀತಿ ಇದೀಗ ನಾವು ಎರಡು ವರ್ಷವನ ಪೂರೈಸಿ ಮೂರರ ಗಡಿಯಲ್ಲಿ ಬಂದು ನಿಂತಿದ್ದೇವೆ. ಓದುಗರ ನಿರಂತರ ಪ್ರೋತ್ಸಾಹದಿಂದ ಮತ್ತು ಸಲಹೆ ಸೂಚನೆಗಳನ್ನು ಹಿರಿಯರು ಕೊಟ್ಟ ಮಾರ್ಗದರ್ಶನ ಈ ಪತ್ರಿಕೆಗೆ ದಾರಿದೀಪವಾಗಿದೆ. ಸಹಸ್ರ ಓದುಗರ ಬಳಗವು ನಮ್ಮ ಜೊತೆ ಇಂದು ಇನ್ನಷ್ಟು ಆನೆ ಬಲ ಸಿಕ್ಕಿದಂತಾಗಿದೆ.
ಪಬ್ಲಿಕ್ ಫೈಲ್ ಸಾಧಕರ ಸಮಾಗಮ :-
ಜನವರಿ 19/01/2025 ರಂದು ಭಾನುವಾರ ಉಡುಪಿ ಜಿಲ್ಲೆಯ ಬೀಡಿನ ಗುಡ್ಡೆ ರಸ್ತೆಯಲ್ಲಿರುವ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಕಲಾ ರಂಗದಲ್ಲಿ ಸಾಧಕರ ಸಮಾಗಮ ಮೇಳಯಿಸಲು ಸಿದ್ಧತೆಗಳು ನಡೆಯುತ್ತಿದೆ. ಪ್ರಥಮ ಬಾರಿ ನಾವು ಸಾಧಕರ ಸಮಾಗಮ ಕಾರ್ಯಕ್ರಮ ಮಾಡಲು ಹೊರಟಾಗ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕಿರುದಾದ ಪೋಸ್ಟ್ ಅನಾವರಣ ಮಾಡಿದ್ದೇವೆ. ಈ ಪೋಸ್ಟಿಗೆ ರಾಜ್ಯದ್ಯಂತ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಯಿತು. ನಮಗೆ ಬಂದ ಸಾಧಕರ ಪೈಕಿ 150ಕ್ಕೂ ಹೆಚ್ಚು ಸಾಧಕರು ಜಗತ್ತಿನಾದ್ಯಂತ ಭಾಗವಹಿಸಿದರು. ಅಂತಹ ಸಾಧಕರ ಪೈಕಿ ನೇರ ನಿಷ್ಠುರ ಮತ್ತು ಪ್ರಕಾರತೆಯನ್ನ ತೋರಿಸುವ ಸಾಧಕರನ್ನು ಗುರುತಿಸುವ ಸವಾಲು ನಮ್ಮ ನಮ್ಮ ಮುಂದಿತ್ತು, ಅದೇ ರೀತಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ಸಾಧಕರನ್ನ ಭಟ್ಟಿ ಇಳಿಸಿದಾಗ ನಮಗೆ 65 ಜನ ಸಾಧಕರು ಮುಖ್ಯ ವಾಹಿನಿಗೆ ತರುವಲ್ಲಿ ನಾವು ಪ್ರಯತ್ನ ಪಟ್ಟೆವು. 65 ಜನರ ಸಾಧಕರವನ್ನ ಮೇಳಯಿಸಲು ನಾವು ಸಜ್ಜಾದ ಕ್ಷಣ ಅಪರೂಪ. ಸಾಧಕರ ಸಮಾಗಮ ಪ್ರಶಸ್ತಿ ಕಾರ್ಯಕ್ರಮವನ್ನು ವಿಭಿನ್ನ ಮತ್ತು ವಿಶಿಷ್ಟ ಹಾಗೂ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲೇ ಯಾವ ಪತ್ರಿಕೆಯೂ ಕೂಡ ಬಿಂಬಿಸಲಾಗದಂತಹ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯಾಗಿದ್ದೇವೆ. ತನ್ನ ಸ್ವಂತಿಕೆಯನ್ನು ಮರೆತು, ಸಮಾಜದ ದೂರ ದೃಷ್ಟಿತ್ವ ದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಮಾಜಸೇವಕರನ್ನ ನಾವು ಆಯ್ಕೆ ಮಾಡಿದ್ದೇವೆ. ಕೃಷಿಯನ್ನು ಮೂಲವಾಗಿಟ್ಟುಕೊಂಡು ಅನ್ನದಾತ ಸುಖಿಭವ ಎನ್ನುವಂತೆ ಕೃಷಿ ಸಾಧಕರನ್ನು ನಾವು ಎತ್ತಿ ಹಿಡಿದಿದ್ದೇವೆ. ಸಂಗೀತಕ್ಕೆ ತಲೆ ತೂಗುವ ಸಾಧಕರು ನಮ್ಮಲ್ಲಿದ್ದಾರೆ. ದೇಶ ಸೇವೆಗಾಗಿ ಅನವರತ ದುಡಿದು ನಿವೃತ್ತಿಯಾದ ಯೋಧರು ನಮ್ಮೊಂದಿಗೆ ಹೆಜ್ಜೆ ಹಾಕಿದ್ದಾರೆ. ಸಾವಿರಾರು ಜನರಿಗೆ ವಿದ್ಯಮಾನ ಮಾಡುವುದರ ಮೂಲಕ ಶಿಕ್ಷಣವನ್ನು ಶಿಕ್ಷೆಯಾಗಿಸದೆ, ಮಕ್ಕಳನ್ನ ಪ್ರೀತಿಯಿಂದ ಓಲೈಕೆ ಮಾಡುವ ಶಿಕ್ಷಕರು ನಮ್ಮ ಜೊತೆ ಸಂಭ್ರಮಿಸಲಿದ್ದಾರೆ. ಕರಾವಳಿಯ ಗಂಡು ಕಲೆಯನ್ನ ಪೋಷಿಸಿ ಆ ಕಲೆಗೊಂದು ಅರ್ಥ ಕೊಡುವ ಕಲಾವಿದರು ನಮ್ಮ ಜೊತೆಗೆ ಹೆಜ್ಜೆಯ ಸ್ಪೂರ್ತಿಯ ಸೆಲೆಗೆ ಪ್ರಶಸ್ತಿ ಪುರಸ್ಕತರಿದ್ದಾರೆ. ಆಯುರ್ವೇದಿಕ್ ತಂತ್ರಜ್ಞಾನವನ್ನು ಸಮಾಜ ಜಗತ್ತಿಗೆ ಸಾರುವ ವೈದ್ಯರುಗಳು ನಮ್ಮ ಜೊತೆ ಇದ್ದಾರೆ. ಕನ್ನಡ ಪತ್ರಿಕೋದ್ಯಮದ ಮೂಲಕ ಸಮಾಜ ತಿದ್ದುವ ಪ್ರೇರಣೆಯೊಂದಿಗೆ ವಿವಿಧ ಮಾಧ್ಯಮ ಮಿತ್ರರು ನಮ್ಮ ಜೊತೆ ಅಕ್ಷರದ ದಾರಿದೀಪ ವಾಗಲಿದಾರೆ. ಕನ್ನಡದ ಕಂಪನ್ನ ಪಸರಿಸುವ ಕನ್ನಡದ ಪ್ರಿಯರು ನಮ್ಮ ಜೊತೆ ಕನ್ನಡದ ಔತಣವನ್ನು ಏರ್ಪಡಿಸಲಿದ್ದಾರೆ. ಹೊರನಾಡ ಕನ್ನಡದಲ್ಲಿ ಸಾಹಿತ್ಯ ಡಿಂಡಿಮ ಬಾರಿಸುವ ಸ್ನೇಹಿತರು ನಮ್ಮ ಜೊತೆ ಇರುತ್ತಾರೆ. ಈ ಬಾರಿ 65 ಜನರ ಸಾಧಕರನ್ನ ನಾವು ಆಯ್ಕೆ ಮಾಡಿದ್ದು ಅತ್ಯಂತ ಸಂತೋಷದ ವಿಷಯವಾಗಿದೆ. ಕನ್ನಡ ಪತ್ರಿಕೋದ್ಯಮದಲ್ಲಿ 65 ಸಾಧಕರನ್ನು ಗೌರವಿಸಿದ ಸಾರ್ಥಕತೆಯ ಹೆಮ್ಮೆ ನಮಗಿನಿಸುತ್ತಿದೆ. ಸಾಧಕರು ನಮ್ಮೊಳಗಿನ ಪ್ರತಿಭೆಯನ್ನ ಹೊರ ಸೂಸಲು ಮತ್ತು ಅವರೊಳಗಿನ ಸೂಕ್ತ ಕಲೆಯನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪತ್ರಿಕೆ ಸದಾ ಸಿದ್ಧವಿದೆ ಎನ್ನುವುದು ಸಾಧಕರ ಆಯ್ಕೆ ಪ್ರಕ್ರಿಯೆಯಲ್ಲಿ ಮತ್ತೆ ಗಟ್ಟಿತನ ಮಾಡಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಗುರುತಿಸುವ ಮೊದಲು ಅವರ ಪೂರ್ವಪರ ವಿಚಾರಗಳನ್ನ ನಾವು ತಿಳಿದುಕೊಂಡೆವು, ಅವರ ಪ್ರತಿಭೆ ಮತ್ತು ಅವರ ಸಾಧನೆಯನ್ನ ವಿಶೇಷವಾಗಿ ತಿಳಿಸುವುದರೊಂದಿಗೆ ಸಮಾಜದ ನಾಗರಿಕರಿಗೆ ವಿಭಿನ್ನ ದೃಷ್ಟಿಕೋನದ ಮೂಲಕ ವಿಶಿಷ್ಟತೆಯನ್ನ ಕಂಡುಕೊಂಡಿದೆ. ಬದುಕು ಬದುಕಿನ ಜೊತೆಗೆ ಬೆಸೆದು ಹೋದ ವಿವಿಧ ಕಾಲ್ಪನಿಕ ವಿಚಾರಗಳನ್ನ ಜನಮನಗೊಳಿಸುವ ಪ್ರತಿಷ್ಠಿತ ವೇದಿಕೆೆೆಗೆ ತರುವ ಉದ್ದೇಶ ಪಬ್ಲಿಕ್ ಫೈಲ್ ಪತ್ರಿಕೆಯ ಮೂಲ ಕಾರಣ. ಬದುಕು ಮತ್ತು ಬದುಕಿನ ಜೊತೆಗೆ ಹೋರಾಣವನ್ನು ಬಿಂಬಿಸುವ ವಿಶಿಷ್ಟ ಮತ್ತು ಕಾಲ್ಪನಿಕ ಸಂಗಮವಾಗಿ ಪಬ್ಲಿಕ್ ಫೈಲ್ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳ ಸಾಧನೆಯನ್ನ್ನುನು ಹಿಂತಿರುಗಿ ನೋಡಿದರೆ, ಸುಮಾರು ನೂರಕ್ಕೂ ಹೆಚ್ಚು ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದಾಗ ಗೌರವ ನಮಗಿದೆ. ಸಮಸ್ತ ಹಿರಿಯ ನಾಗರಿಕರ ಆಶೀರ್ವಾದ, ಓದುಗರ ಬೆಂಬಲ, ಜಾಹೀರಾತು ಪ್ರಕ್ರಿಯೆಯ ಪ್ರೋತ್ಸಾಹ, ನಿರಂತರವಾಗಿ ಮನಗಂಡು ಇನ್ನು ಹತ್ತು ಹಲವು ವಿಚಾರಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಎರಡು ವರ್ಷಗಳ ಹಿಂದೆ ಉಗಮ :
ಪಬ್ಲಿಕ್ ಫೈಲ್ ಪತ್ರಿಕೆ ಎರಡು ವರ್ಷಗಳ ಹಿಂದೆ ಉಗಮಗೊಂಡಿತು. ಸಾರ್ಥಕ ಪತ್ರಿಕೋದ್ಯಮ ತಂಡವನ್ನ ಕಟ್ಟಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆಳೆಸುವಂತಹ ಮತ್ತು ಪ್ರೇರೇಪಿಸುವಂತಹ ಬರಹಗಳು ಸಮಾಜಕ್ಕೆ ನೀಡಿದವು. ನೈಜ ಪತ್ರಿಕೋದ್ಯಮದ ಅಸ್ತ್ರವಾಗಿ ಸಮಾಜವನ್ನು ಮುನ್ನಡೆಸುವ ಪ್ರಯತ್ನ ಸದಾ ಕಾಲ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ನ್ಯೂಸ್, ನೆಟ್ವರ್ಕ್ ಸಮಾಜದ ಮುಖ್ಯ ವಾಹಿನಿಯಲ್ಲಿ ಓದುಗರನ್ನು ಸೃಷ್ಟಿಸಿದೆ. ಬಹುಕಾಲ ಪತ್ರಿಕೋದ್ಯಮದ ಅನುಭವವಿರುವ ತಂಡ ಸಮಾಜವನ್ನು ಜಾಗ್ರತೆಗೊಳಿಸುವಲ್ಲಿ ಮತ್ತೊಮ್ಮೆ ಪ್ರೇರೇಪಿಸಿತು. ಪತ್ರಿಕೋದ್ಯಮದ ಮತ್ತು ಸಾರ್ವಜನಿಕರ ಸಂಪರ್ಕ ಸೇತುವೆ :- ಕನ್ನಡ ಪತ್ರಿಕೋದ್ಯಮ ಮತ್ತು ಸಾರ್ವಜನಿಕರ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ರೀತಿ ಪಬ್ಲಿಕ್ ಫೈಲ್ ಮುನ್ನಡೆಯುತ್ತಿದೆ. ನೈಜ ಪತ್ರಿಕೋದ್ಯಮವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸಾರ್ಥಕತೆಯ ಪಯಣ ನಮಗಿತ್ತು. ಪಬ್ಲಿಕ್ ಫೈಲ್ ಪತ್ರಿಕೆ, ಕನ್ನಡ ಪತ್ರಿಕೋದ್ಯಮ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದೆ.ಪಬ್ಲಿಕ್ ಫೈಲ್ ಪತ್ರಿಕೆ ಒಂದು ವರ್ಷವನ್ನು ಪೂರೈಸಿ, ಎರಡು ವರ್ಷದಿಂದ ದಾಪುಗಲ್ಟು ಇಟ್ಟು, ಈಗ ಎರಡು ವರ್ಷವೂ ಕೂಡ ಈಗ ಕಳೆಯುತಿದೆ. ಎರಡು ವರ್ಷವನ್ನು ಪರಿಪೂರ್ಣತೆಯ ಸಹಕಾರದೊಂದಿಗೆ ಸಾಗುತ್ತಿದ್ದ ನಾವು, ಒಂದಿಷ್ಟು ಬರಹ ಲೇಪಿಸಿ, ಪಬ್ಲಿಕ್ ಫೈಲ್ ಎನ್ನುವ ಪತ್ರಿಕೆ ರಾಜ್ಯ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಯಿತು. ಕನ್ನಡ ಪತ್ರಿಕೆ ಇದುವರೆಗೆ ಮಾಡಿರದಂತಹ ಕೆಲಸವು ಪಬ್ಲಿಕ್ ಪೈಲ್ ಸಮಸ್ತವಾಗಿ ನಿರ್ವಹಿಸುತ್ತಿದೆ. ಸಾರ್ಥಕತೆಯ ಪರಿಪೂರ್ಣತೆಯ ವರದಿಗಳು, ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಮ್ಮದಾಗಿದೆ. ಬರಹ ಮತ್ತು ಬರಹಕ್ಕಿರುವ ಶಕ್ತಿ ಸಮಾಜವನ್ನು ಮತ್ತೆ ಹುರಿದುಂಬಿಸುವ ಹಂತಕ್ಕೆ ತಲುಪಿದೆ. ಸಾಧಕರ ಸಮಾಗಮ ವಿಚಾರದಲ್ಲಿ ನಾವು ಕೈಗೊಂಡಂತಹ ಕ್ರಮಗಳು ಸಮಾಜದ ಕಟ್ಟಕಡೆಯ ಸಾಧಕರನ್ನು ತಲುಪಿಸುವಲ್ಲಿ ಸಾರ್ಥಕತೆ ಕಂಡಿದ್ದೇವೆ.65 ಸಾಧಕರನ ಗುರುತಿಸುವ ಸಲುವಾಗಿ ನಾವು ವಿಶಿಷ್ಟ ರೀತಿಯ ಪರಿಕ್ರಮಗಳನ್ನು ಕೂಡ ಅಳವಡಿಸಿಕೊಂಡಿದ್ದೇವೆ. ಸಮಾಜದಲ್ಲಿ ವಿವಿಧ ಸಾಧಕರನ್ನ ವಿವಿಧ ವಿಭಾಗದಲ್ಲಿ ಆಯ್ಕೆ ಮಾಡುವುದರ ಮೂಲಕ ಆಡಳಿತ ಮಂಡಳಿ ಕೆಲಸ ನಿರ್ವಹಿಸಿದ್ದು,ಇಂತಹ ಅದ್ಭುತ ಪೂರ್ವ ಕಾರ್ಯಕ್ರಮ ಮಾಡಲು ಸಾಕ್ಷಿಯಾಯಿತು. ಈ ರೀತಿಯಾದಂತಹ ಪ್ರಯತ್ನ, ಸಹಕಾರ, ಒಲುಮೆ ಮುಂದೆಯೂ ಹೀಗಿರಲಿ. ನಿಮ್ಮೆಲ್ಲರ ಶುಭ ಹಾರೈಕೆ ಹೀಗೆ ಇರಲಿ.ಶುಭಾಶಯಗಳು.