ಡೈಲಿ ವಾರ್ತೆ: 20/JAN/2025

ಕುಂದಾಪುರ| ಮುಸ್ಲಿಂ ವೇಲ್ ಫೇರ್ ಅಸೋಸಿಯೆಶನ್ ವತಿಯಿಂದ ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಸನ್ಮಾನ

ಕುಂದಾಪುರ: ಮುಸ್ಲಿಂ ವೇಲ್ ಫೇರ್ ಅಸೋಸಿಯೆಶನ್ ಕುಂದಾಪುರ ಇವರು ಆಯೋಜಿಸಿರುವ ಮೂರು ದಿನಗಳ ಕಾಲ ನಡೆದ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ “ಜಾಮಿಯಾ ಟ್ರೋಫಿ-2025″ರ ಈ ಸಂಭ್ರಮದಲ್ಲಿ ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸುಹೇಲ್, ತಬ್ರಿಜ್, ಹುಸೈನ್ ಹೈಕಾಡಿ, ಅಬ್ಬು ಸಾಹೇಬ್, ಹ್ಯಾಪಿ ಕಾರ್ ಸಂಸ್ಥೆ ಮಾಲೀಕ ಮುದಸ್ಸಿರ್, ಸಿರಾಜ್ ಕೋಟೇಶ್ವರ, ಆದಿಲ್ ತೆಕ್ಕಟ್ಟೆ, ಆಸೀಫ್ ತೆಕ್ಕಟ್ಟೆ ಮೊದಲದವರು ಉಪಸ್ಥಿತರಿದ್ದರು.