ಡೈಲಿ ವಾರ್ತೆ: 20/JAN/2025
ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಮೃತ್ಯು!
ತುಮಕೂರು: ಮನೆಯ ಮುಂದಿನ ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಡೆದಿದೆ.
ಜಿ.ಹೊಸಹಳ್ಳಿ ಗ್ರಾಮದ ಅಂಗಡಿ ಮಂಜಣ್ಣ ಎಂಬುವವರ ಮಗು ಕುಶಾಲ್ (3) ಸಾವನ್ನಪ್ಪಿದೆ.
ಮನೆ ಮುಂದೆ ಆಟವಾಡುತ್ತಿದ್ದ ಮಗು ಸುಮಾರು ಹೊತ್ತಾದರೂ ಕಾಣದೆ ಇದ್ದಾಗ ಮನೆಯರು ಹುಡುಕಾಟಕ್ಕೆ ಮುಂದಾಗಿದ್ದಾರೆ. ಆಗ ನೀರಿನ ತೊಟ್ಟಿಯಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಗು ಸಾವಿನ ಹಿನ್ನೆಲೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ