ಡೈಲಿ ವಾರ್ತೆ: 20/JAN/2025
ಹೊನ್ನಾವರ| ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ – ಬೈಕ್ ನಲಿದ್ದ ಮಹಿಳೆ ಸ್ಥಳದಲ್ಲೇ ಸಾವು
ಹೊನ್ನಾವರ: ಮುರುಡೇಶ್ವರ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ಸಹಸವಾರೆ ಪೂಜಾ ಗೌಡ ಸಾವನಪ್ಪಿದ್ದಾರೆ.
ಹೊನ್ನಾವರ ಅಪ್ಪಿಕೇರಿಯ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರದ ಜಾತ್ರೆಗೆ ಹೋಗಿದ್ದರು. ಸೋಮವಾರ ಅವರು ಮರಳಿ ಊರ ಕಡೆ ಹೊರಟಿದ್ದರು. ಶರಾವತಿ ಸೇತುವೆ ಮೇಲೆ ಅವರ ಬೈಕಿಗೆ ಕಾರು ಡಿಕ್ಕಿಯಾಗಿದೆ.
ಪರಿಣಾಮ ಸುರೇಶ ಗೌಡ ಬೈಕಿನಿಂದ ಕೆಳಗೆ ಬಿದ್ದರು. ಪೂಜಾ ಗೌಡ ಸಹ ನೆಲಕ್ಕೆ ಅಪ್ಪಳಿಸಿ ಅಲ್ಲಿಯೇ ಸಾವನಪ್ಪಿದರು. ಇದೇ ಸೇತುವೆ ಮೇಲೆ ಕೆಲವು ದಿನಗಳ ಹಿಂದೆಯೂ ಅಪಘಾತ ನಡೆದಿದ್ದು, ಮೂವರು ಸಾವನಪ್ಪಿದ್ದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಕಾರು ಹಾಗೂ ಬೈಕು ಎರಡೂ ಜಖಂ ಆಗಿದೆ.