ಡೈಲಿ ವಾರ್ತೆ: 21/JAN/2025
ಸಾಲಿಗ್ರಾಮ| ಆಟೋ ರಿಕ್ಷಾಗಳು ಮುಖಮುಖಿ ಡಿಕ್ಕಿ – ಚಾಲಕರು ಸಣ್ಣಪುಟ್ಟ ಗಾಯದೊಂದಿಗೆ ಪಾರು
ಕೋಟ: ಎರಡು ಆಟೋ ರಿಕ್ಷಾಗಳು ಮುಖಮುಖಿ ಡಿಕ್ಕಿ ಹೊಡೆದು ಚಾಲಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾದ ಘಟನೆ ಸಾಲಿಗ್ರಾಮ – ಪಾರಂಪಳ್ಳಿ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಸಾಲಿಗ್ರಾಮದಿಂದ ಪಾರಂಪಳ್ಳಿ ಪಡುಕರೆಗೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಸಾಲಿಗ್ರಾಮಕ್ಕೆ ಬರುತ್ತಿದ್ದ ಆಟೋ ರಿಕ್ಷಾವು ಮುಖಮುಖಿ ಡಿಕ್ಕಿ ಹೊಡೆದು ಒಂದು ರಿಕ್ಷಾವು ಗದ್ದೆಗೆ ಉರುಳಿ ಬಿದ್ದಿದೆ.
ಅಪಘಾತದಲ್ಲಿ ಎರಡು ರಿಕ್ಷಾದ ಚಾಲಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಎರಡು ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಹೆಚ್ಚಿನ ಅಪಾಯ ತಪ್ಪಿದೆ.
ತಕ್ಷಣ ಸ್ಥಳೀಯರ ಸಹಕಾರದಿಂದ ಆಟೋ ರಿಕ್ಷಾವನ್ನು ಮೇಲಕ್ಕೆ ಎತ್ತಲಾಯಿತು.