ಡೈಲಿ ವಾರ್ತೆ: 21/JAN/2025
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು
ಉಳ್ಳಾಲ: ರಾಜ್ಯದಲ್ಲಿ ಸದ್ದು ಮಾಡಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಯಿಂದ 12 ಕೋಟಿ ದರೋಡೆ ಮಾಡಿದ ಪ್ರಮುಖ ಆರೋಪಿ ಮುಂಬೈ ಕಣ್ಣನ್ ಮಣಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಜ. 21 ರಂದು ಮಂಗಳವಾರ ತಲಪಾಡಿಯ ಅಲಂಕಾರು ಗುಡ್ಡೆ ಬಳಿ ನಡೆದಿದೆ.
ಕೋಟೆಕಾರು ಬ್ಯಾಂಕ್‌ನಿಂದ ದರೋಡೆ ಮಾಡಿದ ಆರೋಪಿಗಳು ತಮಿಳುನಾಡಿನಲ್ಲಿ ಸಿಕ್ಕಿಬಿದ್ದಿದ್ದರು. ತಮಿಳುನಾಡಿನಿಂದ ಆರೋಪಿಗಳನ್ನು ಮಂಗಳೂರಿಗೆ ಕರೆ ತಂದು ಮಹಜರು ಮಾಡುವ ವೇಳೆ ಆರೋಪಿ ಕಣ್ಣನ್ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರ ಮೇಲೆ ಕಣ್ಣನ್ ಮಣಿ ದಾಳಿ ನಡೆಸಲು ಯತ್ನಿಸಿದ್ದು, ಸಿಸಿಬಿ ಇನ್ಸ್‌ಪೆಕ್ಟರ್ ರಫೀಕ್ ಅವರು ಶೂಟ್ ಮಾಡಿದ್ದಾರೆ.
ನಿನ್ನೆ ತಮಿಳುನಾಡಿನ ತಿರುವನ್ವೇಲಿ ಪದ್ಮನೇರಿ ಗ್ರಾಮವೊಂದರಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳನ್ನ ಮಂಗಳೂರಿಗೆ ಕರೆ ತರಲಾಗುತ್ತಾ ಇತ್ತು. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಈ ಘಟನೆ ನಡೆದಿದೆ. ದರೋಡೆಯ ಪ್ರಮುಖ ಆರೋಪಿ ಕಣ್ಣನ್ ಮಣಿ ಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.