ಡೈಲಿ ವಾರ್ತೆ: 22/JAN/2025

ವೃದ್ಧನನ್ನು ಕೊಂದು ಶವಕ್ಕೆ ಕಾಫಿ ಗಿಡ ಮುಚ್ಚಿಟ್ಟ ಕಾಡಾನೆ!

ಹಾಸನ: ಕಾಡಾನೆಯೊಂದು ವೃದ್ಧನ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದು, ಶವದ ಮೇಲೆ ಕಾಫಿ ಗಿಡ ಮುಚ್ಚಿದ ಘಟನೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ.

ಕಾಡಾನೆ ದಾಳಿಗೆ ಬಲಿಯಾದ ವೃದ್ಧರನ್ನು ಪುಟ್ಟಯ್ಯ (78) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ. ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿದೆ. ಇದರಿಂದ ವೃದ್ಧ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಳಿಕ ಆನೆ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ.

ಬುಧವಾರ ಮುಂಜಾನೆ ಕಾಫಿ ತೋಟದಲ್ಲಿ ಪುಟ್ಟಯ್ಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.