ಡೈಲಿ ವಾರ್ತೆ: 26/JAN/2025
SDTU ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ
ಮಂಗಳೂರು : ಜ,26: ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ 76ನೇ ಗಣರಾಜ್ಯೋತ್ಸವ ದಿನಾಚರಣೆ ಮಂಗಳೂರಿನ ಎಸ್.ಡಿ.ಟಿಯು ಜಿಲ್ಲಾ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು.
ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಇರ್ಫಾನ್ ಕಾನರವರು ಧ್ವಜಾರೋಹಣಗೈದರು
ಈ ಸಂದರ್ಭದಲ್ಲಿ ಸಂದೇಶ ಬಾಷಣ ನೀಡಿದ ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ರವರು ಸಂವಿಧಾನದ ನಮಗೆ ನೀಡಿದ ಹಕ್ಕು ಮತ್ತು ಅವಕಾಶಗಳ ಬಗ್ಗೆ ಗರಿಷ್ಠ ಮಾಹಿತಿಯೊಂದಿಗೆ ಎಲ್ಲಾ ನಾಗರಿಕರು ಸಂವಿಧಾನದ ಆಶಯಗಳನ್ನು ಪಡೆಯಲು ಕಾರ್ಯನಿರ್ವಹಿಸಿದರೆ ಮಾತ್ರ ಗಣರಾಜ್ಯ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಸಂವಿಧಾನವನ್ನು ನಮಗಾಗಿ ನಾವೇ ಅರ್ಪಿಸಿದ ದಿನದಿಂದ ಇಂದಿನವರೆಗೆ ಏಳು ದಶಕಗಳು ಕಳೆದರೂ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾಗದೆ ಇರುವುದು ನಮ್ಮೆಲ್ಲರ ದುರಂತ ಎಂದು ಹೇಳಿದರು. ನಿವೃತ ಸೇನಾನಿ ಮಹಮ್ಮದ್ ಜಪ್ಪುರವರು ಮಾತನಾಡಿ ಶುಭಹಾರೈಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮುನ್ನೂರು ಮಂಗಳೂರು ನಗರ ಏರಿಯಾ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬಿಪಿ, ಉಪಾಧ್ಯಕ್ಷ ಮುಸ್ತಫಾ ಪಾರ್ಲಿಯಾ, ಆಟೋ ಯುನಿಯನ್ ಮಂಗಳೂರು ನಗರಾಧ್ಯಕ್ಷರಾದ ಇಲ್ಯಾಸ್ ಬೆಂಗ್ರೆ, ಉಪಸ್ಥಿತರಿದ್ದರು.
ಎಸ್.ಡಿ.ಟಿ.ಯು ಮಂಗಳೂರು ನಗರ ಏರಿಯಾ ಸಮಿತಿ ಕಾರ್ಯದರ್ಶಿಯಾದ ಅನ್ಸಾರ್ ಕುದ್ರೋಳಿ ಸ್ವಾಗತಿಸಿದರು ಶರೀಫ್ ಕುತ್ತಾರ್ ಧನ್ಯವಾದಗೈದರು.