ಡೈಲಿ ವಾರ್ತೆ: 03/ಫೆ /2025

ಈಜಲು ಕೆರೆಗೆ ತೆರೆಳಿದ್ದ ಇಬ್ಬರು ಯುವಕರು ನೀರುಪಾಲು!

ಹಾಸನ| ಈಜಲು ಕೆರೆಗೆ ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಭಾನುವಾರ ಸಂಜೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕರನ್ನು ಯಶ್ವಂತ್‌ ಸಿಂಗ್‌(29) ಹಾಗೂ ರೋಹಿತ್‌(28) ಎಂದು ಗುರುತಿಸಲಾಗಿದೆ.

ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಸ್ನೇಹಿತರು, ಭಾನುವಾರ ಕೆಲಸ ಮುಗಿಸಿ ಸಂಜೆ ಕೆರೆಗೆ ಈಜಲು ತೆರಳಿದ್ದರು. ಇಬ್ಬರಿಗೂ ಕೂಡ ಈಜು ತಿಳಿದಿತ್ತು. ಮೊದಲು ರೋಹಿತ್ ಕೆರೆಗೆ ಧುಮುಕಿದ್ದ. ಕೆರೆಯಲ್ಲಿ ಬೆಳೆದಿದ್ದ ಮುಳ್ಳು, ಗಿಡಗೆಂಟೆಗಳು ಹಾಗೂ ಬಳ್ಳಿಗಳು ರೋಹಿತ್‌ ಕಾಲಿಗೆ ಸುತ್ತಿಕೊಂಡಿತ್ತು. ಕೆರೆಯಿಂದ ಮೇಲೆ ಬರಲಾರದೆ ಕಾಪಾಡಿ‌ ಎಂದು ರೋಹಿತ್‌ ಕಿರುಚಾಡಿದ್ದ. ಈ ವೇಳೆ ಗೆಳೆಯನನ್ನು ರಕ್ಷಿಸಲು ಯಶ್ವಂತ್‌ ಸಿಂಗ್‌ ಕೆರೆಗೆ ಇಳಿದಿದ್ದ. ಈ ವೇಳೆ ಬಳ್ಳಿ, ಗಿಡಗೆಂಟೆಗಳು ನಡುವೆ ಯಶ್ವಂತ್‌ಸಿಂಗ್ ಕೂಡ ಸಿಲುಕಿಕೊಂಡಿದ್ದ.

ಕೆರೆಯಿಂದ ಮೇಲೆ ಬರಲಾರದೆ ಇಬ್ಬರು ಗೆಳೆಯರು ನೀರಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಶವಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ತಡರಾತ್ರಿಯ ವೇಳೆಗೆ ತಡರಾತ್ರಿ ಇಬ್ಬರು ಯುವಕರು ಶವಗಳನ್ನು ಕೆರೆಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು. ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.